ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡದ ನಡುವೆ ಸಂಪರ್ಕ ಕಲ್ಪಿಸುವ ತ್ವರಿತ ಬಸ್ ಸೇವೆ (ಬಿಆರ್‌ಟಿಎಸ್) ಚಿಗರಿ ಬಸ್ ಕೊರೊನಾ ಲಾಕ್‌ಡೌನ್ ಹಿನ್ನೆಲೆ ಬಂದ್ ಆಗಿದ್ದವು. ಆದರೆ, ಲಾಕ್‌ಡೌನ್ ಸಡಿಲಿಕೆಯಿಂದ ಈಗ ಮತ್ತೆ ಸಂಚಾರ ಪುನಾಃರಂಭಗೊಂಡಿದೆ. ಅಲ್ಲದೇ, ಬಿಆರ್‌ಟಿಎಸ್ ಬಸ್‌ಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿಆರ್‌ಟಿಎಸ್ ಮುಂದಾಗಿದೆ.
ನಿತ್ಯ ಬಿಆರ್‌ಟಿಎಸ್ ಬಸ್‌ಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೆ ಶೈಕ್ಷಣಿಕ, ವಾಣಿಜ್ಯ ಕೆಲಸಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಆರ್‌ಟಿಎಸ್ ವತಿಯಿಂದ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್, ನಗದು ರಹಿತವಾಗಿ ಪ್ರಯಾಣಿಸಲು ಇ-ಪರ್ಸ್ ಹಾಗೂ ಮಾಸಿಕ ರಿಯಾಯಿತಿ ಸ್ಮಾರ್ಟ್ ಕಾರ್ಡ್‌ದಾರರಿಗೆ ನಗರ, ಉಪನಗರ ಸಾರಿಗೆಗಳಲ್ಲಿ ವಿಶೇಷ ರಿಯಾಯಿತಿ ಮಾಸಿಕ ಪಾಸುಗಳನ್ನು ಜಾರಿಗೆ ತರಲಾಗಿದೆ.
ಹುಬ್ಬಳ್ಳಿ ಸಿಬಿಟಿ - ಧಾರವಾಡ ಹೊಸ ನಿಲ್ದಾಣ 1280 ರೂ.
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಹಾಗೂ ಸಿಬಿಟಿ ಧಾರವಾಡ ಬಿಆರ್‌ಟಿಎಸ್ ಟರ್ಮಿನಲ್ 1200 ರೂ.
ಹುಬ್ಬಳ್ಳಿ ಹೆಚ್‌ಡಿಎಂಸಿ-ಧಾರವಾಡ ಬಿಆರ್‌ಟಿಎಸ್ ಟರ್ಮಿನಲ್ 1120 ರೂ.
ಹುಬ್ಬಳ್ಳಿ ಹೆಚ್‌ಡಿಎಂಸಿ ಧಾರವಾಡ ಹೊಸ ನಿಲ್ದಾಣ 1200 ರೂ.