ಕರ್ನಾಟಕ

karnataka

ETV Bharat / state

BRTC ಬಸ್ ಡಿಕ್ಕಿ: ಸ್ಕೂಟಿ ಸವಾರನ ಸ್ಥಿತಿ ಗಂಭೀರ - BRTC ಬಸ್ ಡಿಕ್ಕಿ : ಸ್ಕೂಟಿ ಸವಾರನ ಸ್ಥಿತಿ ಗಂಭೀರ

ಬಿಆರ್​​​​ಟಿಎಸ್ ರಸ್ತೆ ಕ್ರಾಸ್ ಮಾಡುವಾಗ, ಸ್ಕೂಟಿಗೆ BRTC ಬಸ್ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರನ ಸ್ಥಿತಿ ಗಂಭೀರವಾಗಿದ್ದು, ಸವಾರನನ್ನು ಸ್ಥಳೀಯರ ಸಹಾಯದಿಂದ ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

BRTC bus accident The condition of the bike rider is serious in hubli
BRTC ಬಸ್ ಡಿಕ್ಕಿ

By

Published : Mar 19, 2021, 1:06 PM IST

ಹುಬ್ಬಳ್ಳಿ: BRTC ಬಸ್​ ಮತ್ತು ಸ್ಕೂಟಿ ನಡುವೆ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರನ ಸ್ಥಿತಿ ಗಂಭೀರವಾದ ಘಟನೆ ನಗರದ ನವನಗರ ಆರ್​​​​ಟಿಓ ಹತ್ತಿರ ನಡೆದಿದೆ.

ಅಮರನಗರದ ನಿವಾಸಿ ಮಹೇಶ ಹೊಸಮನಿ ಎಂಬಾತ ಸ್ಕೂಟಿ ತೆಗೆದುಕೊಂಡು ಬಿಆರ್ ಟಿಎಸ್ ರಸ್ತೆ ಕ್ರಾಸ್ ಮಾಡುವಾಗ ಈ ಘಟನೆ ನಡೆದಿದ್ದು, ಸ್ಥಳೀಯರ ಸಹಾಯದಿಂದ ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

BRTC ಬಸ್ ಡಿಕ್ಕಿ

ಇನ್ನು ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ ಎಂದು ಸ್ಥಳೀಯರು ರಸ್ತೆಯನ್ನು ತಡೆದು ಬಿಆರ್ ಟಿಎಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಕ್ರಾಸ್ ಮಾಡುವುದರ ಬಗ್ಗೆ ಬೇರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು. ಈ ಕುರಿತು ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಡ್ರ್ಯಾಗರ್​ ತೋರಿಸಿ ದರೋಡೆ ನಡೆಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ

ABOUT THE AUTHOR

...view details