ಕರ್ನಾಟಕ

karnataka

ETV Bharat / state

ಯುವತಿಗೆ ಚುಡಾಯಿಸಿದ ಯುವಕನಿಗೆ ಸಹೋದರರಿಂದ ಚಾಕು ಇರಿತ - Brothers stabbed knife to Youth in hubballi

ಸಹೋದರಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿಯ ಧಾರವಾಡ ಕಾಲೋನಿಯಲ್ಲಿ ನಡೆದಿದೆ.

brothers-stabbed-knife-to-youth-in-hubballi
ಯುವತಿಗೆ ಚುಡಾಯಿಸಿದ ಯುವಕನಿಗೆ ಸಹೋದರರಿಂದ ಚಾಕು ಇರಿತ

By

Published : Jun 23, 2022, 10:58 PM IST

ಹುಬ್ಬಳ್ಳಿ:ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಸಹೋದರಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಅಣ್ಣಂದಿರಿಬ್ಬರು ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿಯ ಧಾರವಾಡ ಕಾಲೋನಿಯಲ್ಲಿ ನಡೆದಿದೆ.

ಚಂದ್ರಶೇಖರ್ ಎಂಬಾತನೇ ತೀವ್ರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಯುವತಿಯೊಬ್ಬಳಿಗೆ ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆಕೆಯ ಸಹೋದರರಾದ ಕಿರಣ್ ಹಾಗೂ ಅಭಿ ಎನ್ನುವವರು ಚಾಕು ಇರಿದಿದ್ದಾರೆ ಎಂದು ತಿಳಿದುಬಂದಿದೆ.

ತೀವ್ರ ಗಾಯವಾಗಿರುವ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮಂಗಳೂರು: 3 ಮಕ್ಕಳನ್ನು ಬಾವಿಗೆ ತಳ್ಳಿ ಕೊಂದು ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

For All Latest Updates

ABOUT THE AUTHOR

...view details