ಧಾರವಾಡ: ತಾಲೂಕಿನ ದೇವರಹುಬ್ಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರಕಟ್ಟಿ - ಮಲ್ಲೂರಿನ 3ನೇ ವಾರ್ಡ್ನಲ್ಲಿ ಅಣ್ಣಾ-ತಂಗಿ ಇಬ್ಬರೂ ಚುನಾಯಿತರಾಗಿದ್ದಾರೆ. ಅಣ್ಣ-ತಂಗಿಯ ಗೆಲವು ಗಮನ ಸೆಳೆದಿದೆ.
ಅಣ್ಣಾ ನಾಗರಾಜ ಮಹಾದೇವಪ್ಪ ಘಾಟಿನ್ ಸಾಮಾನ್ಯ ಕ್ಷೇತ್ರದಲ್ಲಿ 363 ಮತಗಳನ್ನು ಪಡೆದ ಆಯ್ಕೆಯಾದರೆ, ಅವರ ತಂಗಿ ಗೀತಾ ನಿಂಗಪ್ಪ ಆಯಟ್ಟಿ 389 ಮತಗಳನ್ನು ಪಡೆದು ಹಿಂದುಳಿದ ವರ್ಗ 'ಅ' ಮಹಿಳಾ ಮೀಸಲು ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.