ಕರ್ನಾಟಕ

karnataka

ETV Bharat / state

ಬೆಣ್ಣೆಹಳ್ಳ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್.. ಕೂದಳೆಲೆ ಅಂತರದಲ್ಲಿ ಪಾರಾದ ಯುವಕರು - bridge collapsed three youths escaped

ಹುಬ್ಬಳ್ಳಿಯ ಇಂಗಳಹಳ್ಳಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಹ ಉಂಟಾಗಿದೆ. ಪ್ರವಾಹದ ರಭಸಕ್ಕೆ ಕನ್ನೂರು ಬ್ರಿಡ್ಜ್​ ಕೊಚ್ಚಿ ಹೋಗಿದೆ.

Bridge Collapsed
ಬೆಣ್ಣೆಹಳ್ಳ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್

By

Published : Sep 6, 2022, 1:25 PM IST

ಹುಬ್ಬಳ್ಳಿ:ನಿನ್ನೆ ರಾತ್ರಿ ಧಾರಾಕಾರ ಸುರಿದ ಪರಿಣಾಮ‌ ಬೆಣ್ಣೆ ಹಳ್ಳ ಉಕ್ಕಿ ಹರಿದಿದೆ. ಬೆಣ್ಣೆಹಳ್ಳ ಪ್ರವಾಹ ವೀಕ್ಷಿಸಲು ಯುವಕರು ತೆರಳಿದ್ದು, ಪ್ರವಾಹದ ರಭಸಕ್ಕೆ ಕನ್ನೂರು ಬ್ರಿಡ್ಜ್​ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋಗಿದೆ. ಯುವಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನವಲಗುಂದ ತಾಲೂಕಿನ ಕನ್ನೂರ ಗ್ರಾಮದ ಬಳಿ ನಡೆದಿದೆ.

ಯುವಕರು ಬ್ರಿಡ್ಜ್ ಮೇಲೆ ಸಿಲುಕಿ ಕೆಲ ಕಾಲ ಆತಂಕಗೊಂಡಿದ್ದರು. ಈ ಭಯಾನಕ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಕೂಡಲೇ ಸ್ಥಳೀಯರು ಯುವಕರನ್ನು ರಕ್ಷಿಸಿದ್ದಾರೆ. ಇದರಿಂದ ನವಲಗುಂದ-ಹೈದರಾಬಾದ್​ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ಇಂಗಳಹಳ್ಳಿ ಗ್ರಾಮ ಸಂಪೂರ್ಣ ಜಲಾವೃತ

ನವಲಗುಂದ ತಾಲೂಕಿನ 10ಕ್ಕೂ ಹೆಚ್ಚು ಹಳ್ಳಿಗಳಿಗೆ ನುಗ್ಗಿದ ನೀರು:ರಾತ್ರಿಯಿಡೀ ಸುರಿದ ಮಳೆಯಿಂದ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮ ಸಂಪೂರ್ಣ ಜಲಾವೃತಗೊಂಡು ಜನರು ಕಂಗಾಲಾಗಿದ್ದರು. ಬೆಣ್ಣೆ ಹಳ್ಳದ ದಡದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನವಲಗುಂದ ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿರುವ ನೀರು ಹೊರಹಾಕಲು ಜನರು ಹರಸಾಹಸಪಡುವಂತಾಯಿತು. ಪ್ರವಾಹ ಪೀಡಿತ ಪ್ರದೇಶಗಳಿಗೆ ಜನಪ್ರತಿನಿಧಿಗಳು ಆಗಮಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ :ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ : ಕೆರೆಯಲ್ಲಿ ಮೀನುಗಳ ಮಾರಣಹೋಮ

ABOUT THE AUTHOR

...view details