ಧಾರವಾಡ: ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಸೇತುವೆ ಕೊಚ್ಚಿ ಹೋದ ಘಟನೆ ತಾಲೂಕಿನ ಮದಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಧಾರವಾಡ: ಮಳೆಗೆ ಕೊಚ್ಚಿ ಹೋದ ಸೇತುವೆ... ರಸ್ತೆ ಸಂಪರ್ಕ ಕಡಿತ - ಧಾರವಾಡದಲ್ಲಿ ಮಳೆ
ಧಾರವಾಡ ತಾಲೂಕಿನ ಮದಿಕೊಪ್ಪ ಗ್ರಾಮದ ಕೆರೆ ತುಂಬಿದ್ದು, ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ.
ಧಾರವಾಡದಲ್ಲಿ ಮಳೆಗೆ ಕೊಚ್ಚಿ ಹೋದ ಸೇತುವೆ
ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ, ಹಳ್ಳಗಳು ತುಂಬಿವೆ. ಇದರಿಂದ ತಾಲೂಕಿನ ಮದಿಕೊಪ್ಪ ಗ್ರಾಮದ ಕೆರೆ ತುಂಬಿ, ನೀರು ಹೋಗಲು ನಿರ್ಮಿಸಿದ್ದ ಸೇತುವೆ ಕೂಡಾ ಕೊಚ್ಚಿ ಹೋಗಿದೆ.
ಲೋಕೋಪಯೋಗಿ ಇಲಾಖೆ 80 ಲಕ್ಷ ರೂ. ಅನುದಾನದಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಹಲವಾರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ತಾಲೂಕಿನ ಮದಿಕೊಪ್ಪ, ರಾಮಾಪೂರ, ಹೊಸವಾಳ, ಕಲ್ಲಾಪೂರ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಇಲ್ಲವಾಗಿದೆ. ಇನ್ನೂ ರೈತರ ಜಮೀನಿಗೆ ನೀರು ನುಗ್ಗಿದ್ದು, ಬೆಳೆಗಳು ಸಹ ಹಾಳಾಗಿವೆ.