ಹುಬ್ಬಳ್ಳಿ:ಗಂಧದಗುಡಿ ಸಿನಿಮಾ ನೋಡಲು ಬಂದ ಪುನೀತ್ ರಾಜ್‌ಕುಮಾರ್ ಅವರ ಪುಟ್ಟ ಅಭಿಮಾನಿಯೊಬ್ಬ ಗಾಯಗೊಂಡಿದ್ದಾನೆ. ಈ ಘಟನೆ ನಗರದ ಸುಧಾ ಚಿತ್ರ ಮಂದಿರದ ಬಳಿ ನಡೆದಿದೆ.
ಪಟಾಕಿಯಿಂದ ಕೈಗೆ ಗಾಯವಾದರೂ ಗಂಧದಗುಡಿ ನೋಡಿ ಸಂಭ್ರಮಿಸಿದ ಬಾಲಕ - ಈಟಿವಿ ಭಾರತ ಕನ್ನಡ
ಗಂಧದಗುಡಿ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾಗ ಬಾಲಕನೋರ್ವ ಗಾಯಗೊಂಡಿದ್ದಾನೆ.
ಗಾಯಗೊಂಡ ಬಾಲಕ
ಸಿನಿಮಾ ವೀಕ್ಷಿಸಲು ಆಗಮಿಸಿದಾಗ ಅಭಿಮಾನಿಗಳು ಸಂಭ್ರಮದಿಂದ ಪಟಾಕಿ ಹಚ್ಚಿದ್ದಾರೆ. ಪಟಾಕಿಯ ಕಿಡಿ ಬಾಲಕನ ಕೈಗೆ ತಾಗಿ ರಕ್ತಸ್ರಾವವಾಗಿದೆ. ಇದರಿಂದ ಗಾಬರಿಗೊಂಡ ತಂದೆ ಸಿನಿಮಾ ನೋಡೊದು ಬಿಟ್ಟು ವಾಪಸ್ ಮನೆಗೆ ಹೋಗೋಣ ಎಂದು ಬಾಲಕನಿಗೆ ಒತ್ತಾಯಿಸಿದರು. ಆದರೆ ಬಾಲಕ ತಂದೆಯ ಮಾತು ಕೇಳದೆ ಅಳುತ್ತಲೇ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾನೆ.