ಹುಬ್ಬಳ್ಳಿ:ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರು ಪಾಲಾದ ಘಟನೆ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.
ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರುಪಾಲು - Boy drowned in lake water at Hubli
ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ಬಾಲಕ ನೀರು ಪಾಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.
ಬಾಲಕ ನೀರುಪಾಲು
ಪ್ರಕಾಶ ಗಂಜಿಗಟ್ಟಿ ನೀರಿನಲ್ಲಿ ಮುಳುಗಿದ ಬಾಲಕ. ರವಿವಾರ ಶಾಲೆಗೆ ರಜೆ ಇದ್ದ ಹಿನ್ನೆಲೆ ಎತ್ತುಗಳ ಮೈ ತೊಳೆಯಲು ಹೋದ ಸಂದರ್ಭದಲ್ಲಿ ಬಾಲಕ ನೀರು ಪಾಲಾಗಿದ್ದಾನೆ.
ನೀರುಪಾಲಾದ ಬಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.