ಹುಬ್ಬಳ್ಳಿ: ದೇಶದಲ್ಲಿ ಕೊರೊನಾ ಮತ್ತೆ ವ್ಯಾಪಿಸುತ್ತಿದ್ರೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಹಾಕಿದ್ದಾರೆ.
ಕೊರೊನಾ 2ನೇ ಅಲೆ.. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರುಕಟ್ಟೆಯಲ್ಲಿ ಬಾಕ್ಸ್ ಅಳವಡಿಕೆ - ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ವ್ಯಾಪಾರಸ್ಥರು ಇದೇ ಜಾಗದಲ್ಲಿ ಕಡ್ಡಾಯವಾಗಿ ತರಕಾರಿ ಮಾರಬೇಕು ಎಂದು ಪಾಲಿಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ..
ಮಾರುಕಟ್ಟೆಯಲ್ಲಿ ಬಾಕ್ಸ್ ಅಳವಡಿಕೆ
ಕೊರೊನಾ ಎರಡನೇ ಅಲೆ ಆರಂಭದ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಕಾಳಿದಾಸ ನಗರದಲ್ಲಿ ಪಾಲಿಕೆಯ ವತಿಯಿಂದ ತರಕಾರಿ ಮಾರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ಗಳನ್ನು ಹಾಕಿದರು. ವ್ಯಾಪಾರಸ್ಥರು ಅದೇ ಜಾಗದಲ್ಲಿ ಕಡ್ಡಾಯವಾಗಿ ತರಕಾರಿ ಮಾರಬೇಕು ಎಂದು ಪಾಲಿಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.