ಹುಬ್ಬಳ್ಳಿ: ಲಾಕ್ಡೌನ್ನಿಂದಾಗಿ ಕಂಗಾಲಾದ ಬಡ ಕಾರ್ಮಿಕರು, ಕೈಯಲ್ಲಿ ಉದ್ಯೋಗ ಇಲ್ಲದೆ ಹೊಟ್ಟೆಗೆ ಊಟವಿಲ್ಲದಂತೆ ಪರದಾಡುತ್ತಿದ್ದು, ಬೂಟ್ ಪಾಲಿಶ್ ಮಾಡುವ ವ್ಯಕ್ತಿಯೊಬ್ಬ ನಿಮ್ಮ ಬೂಟ್ ಕೊಡಿ ಸರ್ ಪಾಲಿಶ್ ಮಾಡಿ ಕೊಡ್ತೀನಿ ಎಂದು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿರುವ ಘಟನೆ ನಡೆದಿದೆ.
ನಿಮ್ಮ ಬೂಟ್ ಕೊಡಿ ಸರ್ ಪಾಲಿಶ್ ಮಾಡಿ ಕೊಡ್ತೀನಿ: ಸಚಿವ ಶೆಟ್ಟರ್ ಬಳಿ ಶೂ ಪಾಲಿಶ್ ಮಾಡುವವನ ಅಳಲು! - hubli boot polisher news
ಸಚಿವ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಭೇಟಿ ವೇಳೆ ಶೂ ಪಾಲಿಶ್ ಮಾಡುವ ಯುವಕನೊಬ್ಬ ನಾನು ಭಿಕ್ಷುಕನಲ್ಲ, ನಿಮ್ಮನ್ನು ಭಿಕ್ಷೆನೂ ಬೇಡುತ್ತಿಲ್ಲ, ನಿಮ್ಮ ಬೂಟ್ ಕೊಡಿ ಸರ್ ಪಾಲಿಶ್ ಮಾಡಿ ಕೊಡ್ತೀನಿ ಕೆಲಸ ಇಲ್ಲ ಸರ್ , ಕೆಲಸ ಕೊಡಿ ಸರ್ ಎಂದು ಕೇಳಿಕೊಂಡಿರುವ ಘಟನೆ ನಡೆದಿದೆ.
ಸಚಿವ ಶೆಟ್ಟರ್ ಬಳಿ ಶೂ ಪಾಲಿಶ್ ಮಾಡುವವನ ಅಳಲು
ನಗರದಲ್ಲಿಂದು ಕಿಮ್ಸ್ ಆವರಣದಲ್ಲಿ ನಿರ್ಮಾಣವಾಗಿರುವ ಕೋವಿಡ್ ಸೆಂಟರ್ ಉದ್ಘಾಟಿಸಿದ ನಂತರ ಜಗದೀಶ್ ಶೆಟ್ಟರ್ ಅವರು ಹೋಗುತ್ತಿದ್ದ ವೇಳೆ ಬೂಟ್ ಪಾಲಿಶ್ ಮಾಡುವ ಯುವಕ ಸರ್ ನಿಮ್ ಬೂಟ್ ಪಾಲಿಶ್ ಮಾಡ್ತೀನಿ ಎಂದಿದ್ದಾನೆ. ಸಚಿವರು ಹಣ ನೀಡುವ ಮುನ್ನ, ನಾನು ಭಿಕ್ಷುಕನಲ್ಲ, ನಿಮ್ಮನ್ನು ಭಿಕ್ಷೆನೂ ಬೇಡುತ್ತಿಲ್ಲ. ನಮಗೆ ಕೆಲಸ ಕೊಟ್ಟು ಪುಣ್ಯ ಕಟ್ಕೋಳಿ ಸರ್ ಎಂದು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕಾಲಿಗೆ ಬಿದ್ದು ಅಳಲು ತೋಡಿಕೊಂಡಿದ್ದಾನೆ. ನಂತರ ಸಚಿವ ಜಗದೀಶ್ ಶೆಟ್ಟರ್, 500 ರೂ. ನೀಡಿ ಸಮಾಧಾನ ಮಾಡಿ ಕಳುಹಿಸಿದರು.