ಧಾರವಾಡ:ಅಯೋಧ್ಯೆಯಲ್ಲಿ ನಾಳೆ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ಸೌಹಾರ್ದತೆ ಕಾಪಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ: ಸೌಹಾರ್ದತೆ ಕಾಪಾಡಲು ಶೆಟ್ಟರ್ ಮನವಿ - ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ
ನಾಳೆ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ಎಲ್ಲಾ ವರ್ಗದ ಜನರು ಹಾಗೂ ಎಲ್ಲಾ ಜಾತಿಯ ಜನರು ಸೌಹಾರ್ದತೆಯಿಂದ ಹಬ್ಬದ ರೀತಿಯಾಗಿ ಆಚರಣೆ ಮಾಡೋಣ ಎಂದು ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಸುದ್ದಿ ಹಬ್ಬಿಸಬಾರದು. ಎಲ್ಲರೂ ಸೇರಿ ಶಾಂತಿಯಿಂದ ವರ್ತಿಸಬೇಕು. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದರು.
ಎಲ್ಲಾ ವರ್ಗದ ಜನರು ಹಾಗೂ ಎಲ್ಲಾ ಜಾತಿಯ ಜನರು ಸೌಹಾರ್ದತೆಯಿಂದ ಹಬ್ಬದ ರೀತಿಯಾಗಿ ಆಚರಣೆ ಮಾಡೋಣ. ಅಯೋಧ್ಯೆ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಹಲವಾರು ವರ್ಷಗಳಿಂದ ಕೇಸ್ ಇತ್ತು. ಅದನ್ನು ಸುಪ್ರೀಂಕೋರ್ಟ್ ಬಗೆಹರಿಸಿದೆ. ಸೌಹಾರ್ದತೆಯಿಂದ ಹಬ್ಬವಾಗಿ ಆಚರಣೆ ಮಾಡೋಣ ಎಂದು ಮನವಿ ಮಾಡಿಕೊಂಡರು.