ಹುಬ್ಬಳ್ಳಿ: ಈಗಾಗಲೇ ಮೊಟ್ಟೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದೇನೆ. ಅದು ತನಿಖೆಯಾಗಬೇಕು. ಒಂದು ಘಟನೆಯನ್ನು ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕು ಅನ್ನೋದು ಆಯಾ ರಾಜಕೀಯ ಪಕ್ಷಕ್ಕೆ ಬಿಟ್ಟದ್ದು. ಆದ್ರೆ, ರಾಜ್ಯದಲ್ಲಿ ಶಾಂತಿ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಾರ್ವಕರ್ ಬಗ್ಗೆ ಇಂದಿರಾ ಗಾಂಧಿ ಶ್ರೇಷ್ಠಪುತ್ರ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು-ಸಾರ್ವಕರ್ ಬಗ್ಗೆ ಪರ ವಿರೋಧ ಇದೆ. ಮೊದಲಿನಿಂದಲೂ ವೈಚಾರಿಕತೆಯಲ್ಲಿ ಭಿನ್ನಾಭಿಪ್ರಾಯ ಇದೆ. ಹಲವಾರು ಪ್ರಸಂಗಗಳಲ್ಲಿ ಸಾವರ್ಕರ್ ಅವರ ಬಗ್ಗೆ ಮಣಿಶಂಕರ್ ಅವರೂ ಮಾತನಾಡಿದ್ದಾರೆ. ಐತಿಹಾಸಿಕ ವಿಚಾರಗಳಲ್ಲಿ ಕೆಲವೊಂದರ ಮೇಲೆ ನಂಬಿಕೆ ಇದೆ, ಕೆಲವು ವಿಚಾರಗಳಿಗೆ ವಿರೋಧವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ವಿಷಯವನ್ನು ಯಾವ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು ಅನ್ನೋದು ನಮ್ಮೆಲ್ಲರ ಜವಾಬ್ದಾರಿ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಕೆಲಸ ಎಂದೂ ಮಾಡಬಾರದು ಎಂದರು.