ಹುಬ್ಬಳ್ಳಿ: ಎರಡು ದಿನದ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ದಿನದ ಪ್ರವಾಸದಲ್ಲಿ ಹಲವಾರು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೋದಿ ಕಾರ್ಯಕ್ರಮದಿಂದ ಕೊರೊನಾ ಹರಡಲ್ವಾ ಎಂಬ ಪ್ರಶ್ನೆಗೆ ಸಿಟ್ಟಾದ್ರಾ ಸಿಎಂ!? - ನಾಳೆ ಎರಡು ದಿನ ಕರ್ನಾಟಕಕ್ಕೆ ಮೋದಿ ಪ್ರವಾಸ
ಎರಡು ದಿನದ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಿಎಂ ಮಾಹಿತಿ ನೀಡಿದ್ದಾರೆ.
ಮೋದಿ ಕಾರ್ಯಕ್ರಮದಿಂದ ಕೊರೊನಾ ಹರಡಲ್ವಾ ಎಂಬ ಪ್ರಶ್ನೆಗೆ ಸಿಟ್ಟಾದ್ರಾ ಸಿಎಂ
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎರಡು ದಿನದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಸಹ ಆಯೋಜನೆ ಮಾಡಲಾಗಿದೆ ಎಂದರು. ಮೋದಿ ಕಾರ್ಯಕ್ರಮದಿಂದ ಕೊರೊನಾ ಹಬ್ಬಲ್ವಾ ಎಂದು ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಏನೂ ಉತ್ತರಿಸದೆ ಸಿಎಂ ಹೊರಟರು.
ಇದನ್ನೂ ಓದಿ: 'ಮೈಸೂರಲ್ಲಿ 51 ವಿವಿಧ ವರ್ಗದ ಜನತೆಯ ಜತೆ ಪ್ರಧಾನಿ ಮೋದಿ ಯೋಗ'
Last Updated : Jun 19, 2022, 4:05 PM IST