ಹುಬ್ಬಳ್ಳಿ:ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಾರಾಷ್ಟ್ರ ಚುನಾವಣೆಗೂ ಲಿಂಕ್ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ಇಂದು ಮಧ್ಯಾಹ್ನ ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ 10ಕ್ಕೂ ಹೆಚ್ಚು ಅನುಮಾನಾಸ್ಪದ ಬಾಕ್ಸ್ಗಳು ಪತ್ತೆಯಾಗಿದ್ದವು. ಅದರಲ್ಲಿ ಒಂದು ಬಾಕ್ಸ್ನನ್ನು ಸಿಆರ್ಪಿಎಫ್ ಪೇದೆಯೊಬ್ಬರು ಹುಸೇನ್ ಎಂಬ ವ್ಯಕ್ತಿಯಿಂದ ಈ ಬಾಕ್ಸ್ ತೆರೆಸಿದ್ರು ಎನ್ನಲಾಗಿದೆ. ಆಗ ಬಾಂಬ್ ಸ್ಫೋಟಗೊಂಡು ಯುವಕನ ಕೈ ಛಿದ್ರಗೊಂಡಿದೆ.
ಆದ್ರೆ, ಬಾಕ್ಸ್ನನ್ನು ತೆರೆದು ನೋಡಿದಾಗ ಅದರ ಒಳಗಿರುವ ಸ್ಫೋಟಕ ವಸ್ತು ತುಂಬಿದ ಬಕೆಟ್ ಮೇಲೆ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷದ ಹೆಸರನ್ನು ಕೆಂಪು ಅಕ್ಷರದಲ್ಲಿ ತಮಿಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ.
ಬಾಕ್ಸ್ ಒಳಗೆ ಸ್ಫೋಟಕ ವಸ್ತು ತುಂಬಿದ ಬಕೆಟ್ ಪತ್ತೆ ಅಲ್ಲದೆ ಕೊಲ್ಲಾಪುರದ ಪ್ರಾದೇಶಿಕ ಪಕ್ಷಕ್ಕೆ ಸೇರಿದ ಒಬ್ಬ ವ್ಯಕ್ತಿಯ ಹೆಸರು ಕೂಡಾ ಇದೆ. ಹೀಗಾಗಿ ಈ ಸ್ಫೋಟ ಪ್ರಕರಣಕ್ಕೂ ಇಂದು ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಗೂ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ.
ಸದ್ಯಕ್ಕೆ 10ಕ್ಕೂ ಹೆಚ್ಚು ಬಾಕ್ಸ್ಗಳನ್ನು ಬಯಲು ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಇರಿಸಿದ್ದು, ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಬಂದ ಮೇಲೆ ಇದರ ಸತ್ಯಾಸತ್ಯತೆ ತಿಳಿಯಲಿದೆ.