ಧಾರವಾಡ: ಮಲಪ್ರಭಾ ನದಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಧಾರವಾಡ ತಾಲೂಕಿನ ಹಾರೇಬೆಳವಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಧಾರವಾಡ: ಕಾಲುವೆಗೆ ಜಾರಿ ಬಿದ್ದು ಕೊಚ್ಚಿ ಹೋದ ಯುವಕ ಶವವಾಗಿ ಪತ್ತೆ - Body found at malaprabha canal
ಕಳೆದ ದಿನ ಈ ಯುವಕ ಶಿರೂರು ಗ್ರಾಮದಲ್ಲಿ ಇರುವ ತನ್ನ ಹೊಲಕ್ಕೆ ತೆರಳಿದ್ದ. ಕಡಲೆ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಮನೆಗೆ ತೆರಳುವ ವೇಳೆ ಕಾಲು ಸ್ವಚ್ಛಗೊಳಿಸುವಾಗ ಜಾರಿ ಬಿದ್ದು ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಇಂದು ಶವವಾಗಿ ಪತ್ತೆಯಾಗಿದ್ದಾನೆ.
![ಧಾರವಾಡ: ಕಾಲುವೆಗೆ ಜಾರಿ ಬಿದ್ದು ಕೊಚ್ಚಿ ಹೋದ ಯುವಕ ಶವವಾಗಿ ಪತ್ತೆ Body found](https://etvbharatimages.akamaized.net/etvbharat/prod-images/768-512-9753716-thumbnail-3x2-chaii.jpg)
ಯುವಕನ ಶವ ಪತ್ತೆ
ಮೊರಬ ಗ್ರಾಮದ ಮಲಪ್ರಭಾ ಕಾಲುವೆಯಲ್ಲಿ ಮೃತ ಯುವಕ ವೀರೇಶ್ ಸಿದ್ಧಗಿರಿಮಠ ಶವ ಪತ್ತೆಯಾಗಿದ್ದಾನೆ. ಕಳೆದ ದಿನ ಈ ಯುವಕ ಶಿರೂರು ಗ್ರಾಮದಲ್ಲಿ ಇರುವ ತನ್ನ ಹೊಲಕ್ಕೆ ತೆರಳಿದ್ದ. ಕಡಲೆ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಮನೆಗೆ ತೆರಳುವ ವೇಳೆ ಕಾಲು ಸ್ವಚ್ಛಗೊಳಿಸುವಾಗ ಜಾರಿ ಬಿದ್ದು ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದ.
ಸ್ಥಳಕ್ಕೆ ನವಲಗುಂದ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಶವವನ್ನು ಕಾಲುವೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷಗೆ ಆಸ್ಪತ್ರೆಗೆ ರವಾನಿಸಿದ್ದಾರೆ.