ಕರ್ನಾಟಕ

karnataka

ETV Bharat / state

ರಕ್ತದಾನಕ್ಕೆ ಮುಂದೆ ಬರದ ದಾನಿ; ಧಾರವಾಡದಲ್ಲಿ ಬ್ಲಡ್​ ಬ್ಯಾಂಕ್​ ಖಾಲಿ, ಸಂಕಷ್ಟದಲ್ಲಿ ರೋಗಿ! - ರಕ್ತದಾನ ಮಾಡಲು ಮುಂದೆ ಬರದ ದಾನಿಗಳು

ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್‌ ಆರಂಭಿಸಿದ ಬಳಿಕ ಜಿಲ್ಲೆಯಲ್ಲಿ ರಕ್ತದ ಕೊರೆತೆ ಉಂಟಾಗಿದೆ. ಜನರು ವ್ಯಾಕ್ಸಿನೇಷನ್‌ ಪಡೆಯುವತ್ತ ಮುಖ ಮಾಡಿದ್ದಾರೆ. ಹೀಗಾಗಿ ದಾನಿಗಳಿಲ್ಲದೆ ರಕ್ತದ ಕೊರತೆ ಉದ್ಭವಿಸಿದೆಯಂತೆ.

blood No stock in blood banks in Dharwad district
ರಕ್ತದಾನ ಮಾಡಲು ಮುಂದೆ ಬರದ ದಾನಿಗಳು

By

Published : Jul 5, 2021, 5:37 PM IST

ಧಾರವಾಡ: ಕೊರೊನಾ ಹೊಡೆತದಿಂದ ಜನಜೀವನ ಸಂಕಷ್ಟದಲ್ಲಿದೆ.‌‌ ಜಿಲ್ಲೆಯಲ್ಲಿ ರಕ್ತ ಭಂಡಾರಕ್ಕೂ ಮಹಾಮಾರಿ ವೈರಸ್ ಎಫೆಕ್ಟ್ ತಟ್ಟಿದೆ.

ರಕ್ತದಾನ ಮಾಡಲು ಮುಂದೆ ಬರದ ದಾನಿಗಳು

ಜಿಲ್ಲಾಸ್ಪತ್ರೆಯಲ್ಲಿರುವ ರಕ್ತ ಭಂಡಾರದಲ್ಲಿ ರಕ್ತ ಸಿಗದೇ ಕೆಲ ರೋಗಿಗಳು ಪರದಾಡುವ ಸ್ಥಿತಿ ಇದೆ. ರಕ್ತ ಭಂಡಾರಕ್ಕೆ ಹೋಗಿ ಈ ಬಗ್ಗೆ ಕೇಳಿದ್ರೆ, ನೋ‌ ಸ್ಟಾಕ್ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಕೋವಿಡ್‌ ವ್ಯಾಕ್ಸಿನೇಷನ್ ಎಂಬ ಉತ್ತರ ಸಿಗುತ್ತಿದೆ.

ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್‌ ಆರಂಭಿಸಿದ ಬಳಿಕ ಜಿಲ್ಲೆಯಲ್ಲಿ ರಕ್ತದ ಕೊರೆತೆ ಉಂಟಾಗಿದೆ. ಜನರು ವ್ಯಾಕ್ಸಿನೇಷನ್‌ ಪಡೆಯುವತ್ತ ಮುಖ ಮಾಡಿದ್ದಾರೆ. ಹೀಗಾಗಿ ದಾನಿಗಳಿಲ್ಲದೆ ರಕ್ತದ ಕೊರತೆ ಉದ್ಭವಿಸಿದೆಯಂತೆ. ಪರಿಣಾಮ, ರಕ್ತ ಭಂಡಾರದಲ್ಲಿ ಒಂದೇ ಒಂದು ಯೂನಿಟ್ ರಕ್ತ ಸಂಗ್ರಹ ಇದೆ ಎಂದು ಜಿಲ್ಲಾ ರಕ್ತ ಭಂಡಾರ ವೈದ್ಯಾಧಿಕಾರಿ ಡಾ.ಪ್ರಭು ಹೇಳುತ್ತಾರೆ.

ರಕ್ತದ ಕೊರೆತಯಿಂದ ಗರ್ಭಿಣಿಯರು ಹಾಗು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಬಹಳ ಸಮಸ್ಯೆಯಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 12 ರಕ್ತ ಭಂಡಾರಗಳಿವೆ. ಆದರೆ ಎಲ್ಲಿಯೂ ರಕ್ತ ಸಿಗುತ್ತಿಲ್ಲ. ಕೊರೊನಾ ಲಾಕ್​ಡೌನ್‌ಗಿಂತ ಮುನ್ನ ಒಂದು ಮೆಸೇಜ್ ಮಾಡಿದ್ರೆ ಸಾಕು ಜನರು ಮುಂದೆ ಬಂದು ರಕ್ತದಾನ ಮಾಡುತ್ತಿದ್ದರು ಎಂದರು.

ಇದನ್ನೂ ಓದಿ: ವಕೀಲರ ವೇಷದಲ್ಲಿ ಕೋರ್ಟಿಗೆ ಬಂದ 'ಬನಶಂಕರಿ' ಹಂತಕರು: ನಾಪತ್ತೆಯಾಗಿದ್ದ ಆರೋಪಿಗಳು ಈ ಪ್ಲಾನ್​ ಮಾಡಿದ್ದೇಕೆ?

ABOUT THE AUTHOR

...view details