ಹುಬ್ಬಳ್ಳಿ: ಕರ್ತವ್ಯನಿರತ ಆ್ಯಂಬುಲೆನ್ಸ್ ಚಾಲಕನ ಸಮಯ ಪ್ರಜ್ಞೆಯಿಂದ 12 ವರ್ಷದ ಬಾಲಕ ಮರುಜೀವ ಪಡೆದಿದ್ದಾನೆ. ಚಾಲಕನ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಮಧ್ಯರಾತ್ರಿ ರಕ್ತದಾನ: ಹುಬ್ಬಳ್ಳಿಯಲ್ಲಿ ಬಾಲಕನ ಜೀವ ಉಳಿಸಿದ ಆ್ಯಂಬುಲೆನ್ಸ್ ಚಾಲಕ! - A blood donated ambulance driver
ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕನಿಗೆ ಆ್ಯಂಬುಲೆನ್ಸ್ ಚಾಲಕ ಮಧ್ಯರಾತ್ರಿ ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.
ರಕ್ತದಾನ
ಬಾಲಕ ರಾಹುಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ. ಆತನನ್ನು ಇಲ್ಲಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿಸಿತ್ತು. ಪ್ಲೇಟ್ಲೆಟ್ಸ್ ಕೇವಲ 20,000ಕ್ಕಿಂತ ಕಡಿಮೆಯಾಗಿ ತುರ್ತಾಗಿ ಒಂದು ಯೂನಿಟ್ O + ve ಪ್ಲೇಟ್ಲೆಟ್ಸ್ (SDP) ಬೇಕಾಗಿತ್ತು.
ಲಾಕ್ಡೌನ್ ಹಿನ್ನೆಲೆ ರಕ್ತ ಸಂಗ್ರಹ ಇಲ್ಲದ್ದರಿಂದ ಸಮಸ್ಯೆಯಾಗಿತ್ತು. ಸಮಯ ರಾತ್ರಿ 12 ಆಗಿದ್ದರ ಪರಿಣಾಮ ರಕ್ತ ಸಿಗುವುದು ಕಷ್ಟವಾಗಿತ್ತು. ಆಗ ಕರ್ತವ್ಯದಲ್ಲಿದ್ದ ಲೈಫ್ ಲೈನ್ 24x7 ಆಸ್ಪತ್ರೆಯ ಆ್ಯಂಬುಲೆನ್ಸ್ಚಾಲಕ ನಿಂಗಪ್ಪ ಹಂಗರಕಿ (ಬ್ಯಾಹಟ್ಟಿ ಗ್ರಾಮದವರು) ರಕ್ತದಾನ ಮಾಡಿ ಬಾಲಕನ ಜೀವ ಉಳಿಸಿದ್ದಾರೆ.