ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪವಾದ ವಸ್ತುಗಳನ್ನು ಬಯಲು ಪ್ರದೇಶಕ್ಕೆ ಬಾಂಬ್ ನಿಷ್ಕ್ರಿಯ ತಂಡ ಸಾಗಿಸಿದೆ.
ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಾಚರಣೆ - ಹುಬ್ಬಳ್ಳಿ ರೈಲ್ವೆ ನಿಲ್ದಾಣ
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ವೊಂದು ಸ್ಫೋಟಗೊಂಡ ಪರಿಣಾಮ ವ್ಯಕ್ತಿ ತೀವ್ರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ವಸ್ತುಗಳನ್ನು ಬಯಲು ಜಾಗಕ್ಕೆ ತಂದು, ಬಾಂಬ್ ನಿಷ್ಕ್ರಿಯ ದಳವನ್ನ ಆ ಕಡೆ ಸಾಗಿಸಿ ಕಾರ್ಯಚರಣೆ ಕೈಗೊಳ್ಳಲಾಗಿದೆ.
![ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಾಚರಣೆ](https://etvbharatimages.akamaized.net/etvbharat/prod-images/768-512-4822775-thumbnail-3x2-hbl.jpg)
ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಚರಣೆ
ಹುಬ್ಬಳ್ಳಿ ಸ್ಫೋಟ ಪ್ರಕರಣ: ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಚರಣೆ
ರೈಲ್ವೆ ನಿಲ್ದಾಣದಲ್ಲಿ ಬಾಂಬ್ ತರಹದ ವಸ್ತು ಸ್ಫೋಟಗೊಂಡ ಪರಿಣಾಮ ಯುವಕ ಹುಸೇನ್ ನಾಯಕ್ ಎಂಬುವವರ ಕೈ ಸಂಪೂರ್ಣವಾಗಿ ಛಿದ್ರಗೊಂಡಿದೆ. ಹಾಗಾಗಿ ಘಟನೆ ನಡೆದ ಸ್ಥಳದಲ್ಲಿ ಇದ್ದ 10ಕ್ಕೂ ಹೆಚ್ಚು ಬಾಕ್ಸ್ಗಳನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಯಲು ಪ್ರದೇಶಕ್ಕೆ ಸಾಗಿಸಿದೆ
ಬಾಕ್ಸ್ಗಳನ್ನು ರೈಲ್ವೆ ನಿಲ್ದಾಣದ ಬಳಿ ಇರುವ ರೈಲ್ವೆ ಗ್ರೌಂಡ್ಗೆ ಸಾಗಿಸಲಾಗಿದ್ದು, ಮರಳಿನ ಚೀಲಗಳ ರಾಶಿಯ ಮಧ್ಯೆ ಬಾಕ್ಸ್ಗಳನ್ನು ತಂದಿಟ್ಟು ಬಾಂಬ್ ತರಹದ ವಸ್ತುಗಳ ತಪಾಸಣೆ ಮುಂದುವರೆಸಿದ್ದಾರೆ.
Last Updated : Oct 21, 2019, 9:45 PM IST