ಕರ್ನಾಟಕ

karnataka

ಅಯೋಧ್ಯೆಯ ರಾಮ ಮಂದಿರಕ್ಕೆ ಧಾರವಾಡದ ಕುರುಬ ಸಮುದಾಯದಿಂದ ಕಂಬಳಿ ಉಡುಗೊರೆ

ಅಯೋಧ್ಯೆಯ ರಾಮ ಮಂದಿರದಲ್ಲಿನ ಶ್ರೀರಾಮನ ಪೂಜೆಗಾಗಿ ಧಾರವಾಡದ ಕುರುಬ ಸಮುದಾಯದಿಂದ ಕಂಬಳಿಯನ್ನು ಉಡುಗೊರೆಯಾಗಿ ಕಳುಹಿಸಿಕೊಡಲಾಗಿದೆ.

By ETV Bharat Karnataka Team

Published : Jan 4, 2024, 9:08 PM IST

Published : Jan 4, 2024, 9:08 PM IST

ETV Bharat / state

ಅಯೋಧ್ಯೆಯ ರಾಮ ಮಂದಿರಕ್ಕೆ ಧಾರವಾಡದ ಕುರುಬ ಸಮುದಾಯದಿಂದ ಕಂಬಳಿ ಉಡುಗೊರೆ

ಅಯೋಧ್ಯೆಯ ರಾಮ ಮಂದಿರ  Ayodhya Ram Mandir  Kuruba community  ಕಂಬಳಿ ಉಡುಗೊರೆ
ಅಯೋಧ್ಯೆಯ ರಾಮ ಮಂದಿರಕ್ಕೆ ಧಾರವಾಡದ ಕುರುಬರಿಂದ ಕಂಬಳಿ ಉಡುಗೊರೆ

ಅಯೋಧ್ಯೆಯ ರಾಮ ಮಂದಿರಕ್ಕೆ ಧಾರವಾಡದ ಕುರುಬರಿಂದ ಕಂಬಳಿ ಉಡುಗೊರೆ

ಧಾರವಾಡ:ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ರಾಮಮಂದಿರ ಲೋಕಾಪರ್ಣೆಗೆ ಸಜ್ಜುಗೊಂಡಿದೆ. ಶ್ರೀರಾಮನ ಮೂರ್ತಿ ಪೂಜೆಗೆ ಧಾರವಾಡದ ಕುರುಬರ ಎರಡು ಕಂಬಳಿಗಳು ಸಿದ್ಧಗೊಂಡಿವೆ. ಧಾರವಾಡ ಕಮಲಾಪೂರದ ಸುಭಾಷ ಬಸಪ್ಪ ರಾಯಪ್ಪನವರ ಎರಡು ಕಂಬಳಿಗಳನ್ನು ದೇಣಿಗೆ ರೂಪದಲ್ಲಿ ಅಯೋಧ್ಯಗೆ ಶ್ರೀರಾಮನ ಪೂಜೆಗೆ ಕಳಿಸಲು ಸಿದ್ಧಪಡಿಸಿದ್ದಾರೆ. ಇಂತದೊಂದು ಸಂತಸದ ವಿಷಯ ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಕೀರ್ತಿ ತರುವಂತದ್ದಾಗಿದೆ.

ಇದೇ ತಿಂಗಳು ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರ ಉದ್ಘಾಟನೆ ಆಗುತ್ತಿದೆ. ಮಂದಿರದ ಉದ್ಘಾಟನೆಗೆ ಕಂಬಳಿಗಳನ್ನು ಮಾಜಿ ಮೇಯರ್ ಈರೇಶ ಅಂಚಟಗೇರಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ನೀಡುತ್ತಾರೆ. ಸಚಿವ ಜೋಶಿಯವರು ಈ ಕಂಬಳಿಗಳನ್ನು ಅಯೋಧ್ಯೆಗೆ ತಲುಪಿಸಲಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯು ಶ್ರೀರಾಮನ ಮೂರ್ತಿ ಉದ್ಘಾಟನೆ ಪೂಜೆಗೆ ಕಂಬಳಿಗಳನ್ನು ಬಳಸುತ್ತಾರೆ. ಇದರಿಂದ ಉತ್ತರ ಕರ್ನಾಟಕದ ಕಂಬಳಿಗಳನ್ನು ಕೊಡುಗೆಯಾಗಿ ಕೊಡಲಾಗುತ್ತದೆ. ರಾಮನ ಪೂಜೆಯಲ್ಲಿ ಬಳಕೆಯಾಗುವ ಕಂಬಳಿಗಳನ್ನು ನೀಡುವ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಕಂಬಳಿ ಕಳುಹಿಸಿದ ಸುಭಾಷ್ ರಾಯಪ್ಪನವರ ಸಂತಸ ವ್ಯಕ್ತಪಡಿಸಿದ್ದಾರೆ. ಸುಮಾರು ಮೂರ್ನಾಲ್ಕು ತಿಂಗಳಿನಿಂದ ತಯಾರಿಸಲಾಗಿರುವ ಕಂಬಳಿಗಳನ್ನು ಕರಿ ಕಟ್ಟಿ ಮಡಿ ಮಾಡುವ ಮೂಲಕ ಶ್ರೀರಾಮನ ಪೂಜೆ ಕಳಿಸಿ ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ.

ನಾಗರಶೈಲಿಯಲ್ಲಿ ಗಮನ ಸೆಳೆಯುವ ಅಯೋಧ್ಯೆಯ ರಾಮಮಂದಿರ:ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ಜನವರಿ 22 ರಂದು ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ. ಇದು ದೇಶ ಮತ್ತು ವಿದೇಶಗಳಲ್ಲಿರುವ ರಾಮ ಭಕ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಶತಮಾನಗಳಿಂದ ಹೋರಾಟ ನಡೆಸಿಕೊಂಡು ಬಂದು ಈಗ ತಲೆಎತ್ತಿರುವ ರಾಮಮಂದಿರದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದು ಎಲ್ಲ ಭಕ್ತರಲ್ಲಿ ಕುತೂಹಲ ಮೂಡಿದೆ.

ಇದನ್ನು ತಣಿಸಲು ರಾಮಮಂದಿರ ನಿರ್ಮಾಣ ಹಾಗೂ ನಿರ್ವಹಣೆಯ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರದ ಹಲವು ವಿಶೇಷತೆಗಳನ್ನು ಬಹಿರಂಗಪಡಿಸಿದೆ. ದೇವಾಲಯವನ್ನು ಸಾಂಪ್ರದಾಯಿಕ ನಾಗರ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಅತ್ಯದ್ಭುತವಾಗಿ ನಿರ್ಮಾಣ ಮಾಡಲಾಗಿದೆ. ಕಣ್ಣು ಕುಕ್ಕುವ ಕಲಾ ಶೈಲಿ ಹಾಗೂ ಮಂಟಪಗಳು ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ.

380 ಅಡಿ ಉದ್ದ (ಪೂರ್ವ- ಪಶ್ಚಿಮ), 250 ಅಡಿ ಅಗಲ ಹಾಗೂ 161 ಅಡಿ ಎತ್ತರವಿದೆ. ಕಟ್ಟಡವು ಮೂರು ಅಂತಸ್ತಿನಿಂದ ಕೂಡಿದೆ. ಪ್ರತಿ ಮಹಡಿಯು 20 ಅಡಿ ಎತ್ತರ ಹೊಂದಿದೆ. ಒಟ್ಟು 392 ಕಂಬಗಳು ಹಾಗೂ 44 ಬಾಗಿಲುಗಳಿವೆ. ಮುಖ್ಯ ಗರ್ಭಗುಡಿಯಲ್ಲಿ ಬಾಲರಾಮನ ಸ್ಥಾಪಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇದೆ. ಸಭಾಂಗಣವು ನೃತ್ಯ, ರಂಗ, ಸಭಾ, ಪ್ರಾರ್ಥನಾ ಹಾಗೂ ಕೀರ್ತನ ಎಂಬ ಐದು ಮಂಟಪಗಳು ಗಮನ ಸೆಳೆಯುತ್ತವೆ.

ಇದನ್ನೂ ಓದಿ:AI ಕಣ್ಗಾವಲಿನಲ್ಲಿ ರಾಮಮಂದಿರ; ಅಯೋಧ್ಯೆಯಲ್ಲಿ ಬಿಗಿ ಭದ್ರತೆ

ABOUT THE AUTHOR

...view details