ಹುಬ್ಬಳ್ಳಿ:ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗಾಗಿ ವಾಮಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕುಂದಗೋಳದಲ್ಲಿ ಕುರಿಗಳ ಬಲಿ, ಉಪ ಚುನಾವಣೆ ಗೆಲುವಿಗೆ ಮಾಡಿದ್ರಾ ವಾಮಾಚಾರ? - undefined
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಹೊರವಲಯದಲ್ಲಿ ಕುರಿಗಳನ್ನು ಕೊಂದು ಬನ್ನಿಮರಕ್ಕೆ ನೇತು ಹಾಕಿ ವಾಮಾಚಾರ ಮಾಡಲಾಗಿದೆ. ನಿನ್ನೆ ಅಮವಾಸ್ಯೆ ದಿನದಂದು ಕುರಿಗಳನ್ನ ಬಲಿಕೊಟ್ಟು ಬಿಜೆಪಿಯವರು ವಾಮಾಚಾರ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ.
![ಕುಂದಗೋಳದಲ್ಲಿ ಕುರಿಗಳ ಬಲಿ, ಉಪ ಚುನಾವಣೆ ಗೆಲುವಿಗೆ ಮಾಡಿದ್ರಾ ವಾಮಾಚಾರ?](https://etvbharatimages.akamaized.net/etvbharat/prod-images/768-512-3196696-thumbnail-3x2-hbljpg.jpg)
ವಾಮಾಚಾರ
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಹೊರವಲಯದಲ್ಲಿ ಕುರಿಗಳನ್ನು ಕೊಂದು ಬನ್ನಿಮರಕ್ಕೆ ನೇತು ಹಾಕಿ ವಾಮಾಚಾರ ಮಾಡಲಾಗಿದೆ. ನಿನ್ನೆ ಅಮವಾಸ್ಯೆ ದಿನದಂದು ಕುರಿಗಳನ್ನ ಬಲಿಕೊಟ್ಟು ಬಿಜೆಪಿಯವರು ವಾಮಾಚಾರ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ.
ಬನ್ನಿ ಮರಕ್ಕೆ ಕುರಿ ಬಲಿಕೊಟ್ರೆ ಗೆಲ್ಲುತ್ತಾರೆಂದು ಮೂಢನಂಬಿಕೆ ಇದೆ. ಹೀಗಾಗಿ ಈ ನಂಬಿಕೆಯಿಂದ ಕಿಡಿಗೇಡಿಗಳು ಕುರಿ ಮರಿಗಳ ತಲೆ ಕೆಳಗೆ ಮಾಡಿ ನೇತು ಹಾಕಿದ್ದಾರೆ. ಯರಗುಪ್ಪಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಸ್ವಗ್ರಾಮವಾಗಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಆ ಕುರಿತು ಆತಂಕಕ್ಕೆ ಮೂಡಿದೆ.