ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್ಗೆ ನೀಡಲಾಗುವ ಅಂಪೋಟೆರಿಸನ್ ಬಿ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಅಕ್ರಮ ಮಾರಾಟ; ಹುಬ್ಬಳ್ಳಿಯಲ್ಲಿ ಮೂವರ ಬಂಧನ - ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ
ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ವರದಾನವಾಗಿರುವ ಅಂಪೋಟೆರಿಸನ್ ಬಿ ಇಂಜೆಕ್ಷನ್ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ನಾಸೀರ್ ಹುಸೇನ್ ಅಕ್ತಾರ, ರಾಘವೇಂದ್ರ ಉಣಕಲ್, ನಾಗರಾಜ ನಡವಲಕೇರಿ ಬಂಧಿತ ಆರೋಪಿಗಳು. ಕೊರೊನಾದಿಂದ ನಿತ್ಯ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪಾಪಿಗಳು ಜೀವ ರಕ್ಷಕ ಔಷಧಿಯನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು.
ಬಂಧಿತರಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಇದ್ದಾನೆ. ಕಿಮ್ಸ್ ಆಸ್ಪತ್ರೆಯ ವ್ಯಾಪ್ತಿಯ ಔಷಧಿ ಅಂಗಡಿಯಲ್ಲಿ ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ 4 ವಯಲ್ಸ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಪ್ರವೇಶಿಸಿದ ಮುಂಗಾರು: ಬೆಂಗಳೂರಲ್ಲಿ ಭಾರೀ ಮಳೆ, ಕೆಲ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್