ಹುಬ್ಬಳ್ಳಿ :ಬಿಜೆಪಿ ನೇತೃತ್ವದ ಸರ್ಕಾರ ಜನ ಸಾಮಾನ್ಯರಿಗೆ ಸ್ಪಂದಿಸದ ಸರ್ಕಾರ. ಹಾನಗಲ್ನಲ್ಲಿ ಹಣ, ಅಧಿಕಾರಿ, ತೋಳು ಬಲ ಪ್ರದರ್ಶನ ಮಾಡಿದ್ದರು. ಎಲ್ಲ ರೀತಿಯ ಭಯ ಪಡಿಸುವ ಪ್ರಯತ್ನವನ್ನು ಸಿಎಂ ಮಾಡಿದ್ದರು. ಆದರೂ ಅವರ ಸ್ವ ಕ್ಷೇತ್ರದಲ್ಲಿ ಜನರು ಬುದ್ಧಿ ಕಲಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಮೋದಿ ಮಾಡಿದ್ದರು. ಪ್ರತಿಭಟನೆ ಮಾಡಿದ ರೈತರನ್ನು ಪಾಕಿಸ್ತಾನಿಗಳು, ಕಲಿಸ್ತಾನಿಗಳು ಎಂದೇಳಿದ್ದರು. ಆದರೆ, ಯಾವುದೇ ಚರ್ಚೆ ಇಲ್ಲದೇ ಮಸೂದೆಯನ್ನು ವಾಪಸ್ ಪಡೆದಿದ್ದಾರೆ ಎಂದು ಲೇವಡಿ ಮಾಡಿದರು.