ಕರ್ನಾಟಕ

karnataka

ETV Bharat / state

ಸಂಘದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್​ ಸುಟ್ಟು ಹೋಗುತ್ತೆ: ನಳಿನ್​ಕುಮಾರ್​ ಕಟೀಲ್​ - bjp state president nalin kumar kateel criticize on siddaramaih

ಈ ಹಿಂದೆ ಸಂಘವನ್ನು ನಿಷೇಧಿಸಲು ಹೋದವರು ಕೈಸುಟ್ಟುಕೊಂಡಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾಗಾಂಧಿ ಕೂಡ ಇದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಲೆಕ್ಕ ಎಂದು ಟೀಕಿಸಿದ್ದಾರೆ..

nalin-kumar-kateel
ನಳಿನ್​ಕುಮಾರ್​ ಕಟೀಲ್​

By

Published : Jun 6, 2022, 3:35 PM IST

Updated : Jun 6, 2022, 3:56 PM IST

ಧಾರವಾಡ :ಆರ್​ಎಸ್​ಎಸ್​ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡಬಾರದು. ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾ ಗಾಂಧಿ ಅವರು ಸಂಘವನ್ನು ಕೆಣಕಿ ಕೈ ಸುಟ್ಟುಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಸಂಘದ ವಿರುದ್ಧ ಹಗುರ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷವೇ ಸುಟ್ಟು ಹೋಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಹೇಳಿದರು.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಪರವಾಗಿ ಪ್ರಚಾರ ಮಾಡಲು ನಗರಕ್ಕೆ ಆಗಮಿಸಿದಾಗ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಂಘದ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಭೂಷಣವಲ್ಲ. ಅವರ ಪಕ್ಷದ ಹಿರಿಯರಾದ ಜಾಫರ್ ಷರೀಫ್ ಅವರು ಸಂಘದ ಬಗ್ಗೆ ಒಳ್ಳೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ವಿ.ಎಸ್​. ಉಗ್ರಪ್ಪ ಅವರು ಸಂಘದ ಶಾಖೆಗೆ ಹೋದವರು ಎಂದು ಹೇಳಿದರು.

ಸಂಘದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್​ ಸುಟ್ಟು ಹೋಗುತ್ತೆ: ನಳಿನ್​ಕುಮಾರ್​ ಕಟೀಲ್​

ಈ ಹಿಂದೆ ಸಂಘವನ್ನು ನಿಷೇಧಿಸಲು ಹೋದವರು ಕೈಸುಟ್ಟುಕೊಂಡಿದ್ದಾರೆ. ಇದರಲ್ಲಿ ಮಾಜಿ ಪ್ರಧಾನಿಗಳಾದ ನೆಹರೂ, ಇಂದಿರಾಗಾಂಧಿ ಕೂಡ ಇದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಲೆಕ್ಕ ಎಂದು ಟೀಕಿಸಿದ್ದಾರೆ.

ಹೊರಟ್ಟಿ ಗೆಲ್ಲಿಸಲು ಮನವಿ :ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರ ಪರ ಪ್ರಚಾರ ಮಾಡುತ್ತಿದ್ದೇನೆ. ಹುಬ್ಬಳ್ಳಿ, ಧಾರವಾಡದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯಸಭಾದ ಮೂರೂ ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭರವಸೆ ವ್ಯಕ್ತಪಡಿಸಿದರು.

ಓದಿ :ರಾಜ್ಯಸಭೆ ಚುನಾವಣೆ: ಜೆಡಿಎಸ್‍ ಮತಗಳನ್ನು ಒಡೆಯಲು ಕಾಂಗ್ರೆಸ್​ಗೆ ಸಾಧ್ಯವಿಲ್ಲ- ನಿಖಿಲ್ ಕುಮಾರಸ್ವಾಮಿ

Last Updated : Jun 6, 2022, 3:56 PM IST

For All Latest Updates

TAGGED:

ABOUT THE AUTHOR

...view details