ಕರ್ನಾಟಕ

karnataka

ETV Bharat / state

ಸಂವಾದದಲ್ಲಿ ಮೋದಿ ಕೊಂಡಾಡಿದ ನಡ್ಡಾ: ಶೆಟ್ಟರ್ ಟಿಕೆಟ್‌ ಕುರಿತ ನಿರ್ಧಾರಕ್ಕೆ ಸಮರ್ಥನೆ - ಈಟಿವಿ ಭಾರತ ಕನ್ನಡ

ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

bjp-national-president-jp-nadda-at-hubballi
ಸಂವಾದದಲ್ಲಿ ಮೋದಿ ಕೊಂಡಾಡಿದ ನಡ್ಡಾ: ಶೆಟ್ಟರ್ ಟಿಕೆಟ್ ಸಮರ್ಥಿಸಿಕೊಂಡ ರಾಷ್ಟ್ರೀಯ ಅಧ್ಯಕ್ಷ

By

Published : Apr 18, 2023, 8:10 PM IST

Updated : Apr 18, 2023, 9:13 PM IST

ಸಂವಾದದಲ್ಲಿ ಮೋದಿ ಕೊಂಡಾಡಿದ ನಡ್ಡಾ: ಶೆಟ್ಟರ್ ಟಿಕೆಟ್‌ ಕುರಿತ ನಿರ್ಧಾರಕ್ಕೆ ಸಮರ್ಥನೆ

ಹುಬ್ಬಳ್ಳಿ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಂದು ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಕೊಂಡಾಡಿದರು.

ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಲ್ಲಿ ಒಂದು ದೀರ್ಘ ನೆಗೆತ ಕಂಡಿದೆ. ಕಾಂಗ್ರೆಸ್‌ ಎಪ್ಪತ್ತು ವರ್ಷದಲ್ಲಿ ಸಮಾಜವನ್ನು ಒಡೆದಿದೆ. ಸಮಾಜ ಒಡೆಯುತ್ತಾ ಒಡೆಯುತ್ತಾ ಅವರು ತಾವೇ ಒಡೆದು ಹೋಗಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಒಡೆದು ಹೋಗಿದ್ದಾರೆ. ಕಾಂಗ್ರೆಸ್‌ನವರು ಕರ್ನಾಟಕದಲ್ಲೂ ವಿಭಜನೆಯಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿಗಳು ಎಲ್ಲರನ್ನೂ ಒಗ್ಗಟ್ಟಾಗಿ, ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುತ್ತಿದ್ದಾರೆ. ಭಾರತದ ರಾಜಕೀಯದ ಸಂಸ್ಕೃತಿಯನ್ನು ಮೋದಿಯವರು ಬದಲಿಸಿದ್ದಾರೆ. ಬಡವರು, ಆದಿವಾಸಿಗಳಿಗೆ ಪದ್ಮ ಪ್ರಶಸ್ತಿ ಸಿಗುತ್ತಿದೆ. ಇದು ಮೋದಿ ನೇತೃತ್ವದ ಆಡಳಿತ ಎಂದು ಹೇಳಿದರು.

ಸಂವಾದದಲ್ಲಿ ವ್ಯಕ್ತಿಯೊಬ್ಬರು 16 ಪಾಲಿಕೆ ಸದಸ್ಯರ ಸಾಮೂಹಿಕ ರಾಜೀನಾಮೆ ವಿಚಾರ ಪ್ರಸ್ತಾಪ ಮಾಡಿ, ನಿಮ್ಮದು ಶಿಸ್ತಿನ ಪಕ್ಷ ಎಂದು ಹೇಳುತ್ತೀರಿ. ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳುತ್ತೇವೆ. ಅವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಪರೋಕ್ಷವಾಗಿ ಶೆಟ್ಟರ್‌ಗೆ ಟಿಕೆಟ್​ ಕೊಡದೇ ಇರುವುದನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ :ಹುಬ್ಬಳ್ಳಿಗೆ ಜೆ.ಪಿ.ನಡ್ಡಾ ಆಗಮನ

Last Updated : Apr 18, 2023, 9:13 PM IST

ABOUT THE AUTHOR

...view details