ಧಾರವಾಡ :ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಇಂತಹ ದೇಹದ್ರೋಹಿ ಚಟಿವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ. ಈ ಗ್ಯಾಂಗ್ ಜೊತೆಗಿರುವ ಪಕ್ಷಗಳ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಗುಪ್ಕಾರ್ ಗ್ಯಾಂಗ್ ದೇಶದ್ರೋಹಿ ಚಟುವಟಿಕೆ ಹಿನ್ನೆಲೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಅವರು, ಫಾರುಕ್ ಅಬ್ದುಲ್ಲಾ ಹಾಗೂ ಶೇಕ್ ಅಬ್ದುಲ್ಲಾ ಅವರು ಭಾರತದ ಹಿತವನ್ನು ಕಾಪಾಡದೇ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇತ್ತ ಗಡಿ ಖ್ಯಾತೆ ತೆಗೆಯುವ ಚೀನಾದವರಿಗೆ ಮೋದಿ ತಕ್ಕ ಪಾಠವನ್ನು ಕಲಿಸುತ್ತಿದ್ದಾರೆ. ದೇಶದ ಬಗ್ಗೆ ಆತ್ಮಾಭಿಮಾನ ಇದ್ದವರು ಮೊದಲು ಚೀನಾ ಖ್ಯಾತೆಯನ್ನು ವಿರೋಧ ಮಾಡಬೇಕು ಎಂದು ದೇಶದಲ್ಲಿ ಈ ಹಿಂದೆ ನೀಡಲಾಗಿದ್ದ ಪಶಸ್ತಿಗಳನ್ನು ವಾಪಸ್ ಕೊಟ್ಟರುವರ ನಡೆಯನ್ನು ಪ್ರಶ್ನಿಸಿದರು.
ದೇಶವನ್ನು ಹಾಳು ಮಾಡುತ್ತಾ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಗುಪ್ಕಾರ್ ಜೊತೆಗೆ ಸೇರಿದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆಗಳು ಆಗುತ್ತಿವೆ. 130ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕೊಂದು ಹಾಕಲಾಗಿದೆ ಎಂದು ಜೋಶಿ ಇದೇ ವೇಳೆ ಗಂಭೀರ ಆರೋಪ ಮಾಡಿದರು.
ಇನ್ನು ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಓಡಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು. ಕೇವಲ ನೀರಾವರಿ ಯೋಜನೆ ಬಗ್ಗೆ ಮಾತನಾಡಿ ತೆರಳಿದ್ದಾರೆ. ಅಷ್ಟನ್ನೇ ನಾವು ಮಾಡಿದ್ದು ಉಳಿದಿದ್ದು ಗೊತ್ತಿಲ್ಲ ಎಂದರು.