ಕರ್ನಾಟಕ

karnataka

ETV Bharat / state

ಧಾರವಾಡ: ಅಂಗಡಿ ವಿಚಾರವಾಗಿ ಇಬ್ಬರ ನಡುವೆ ಜಗಳ.. ಗನ್ ತೋರಿಸಿ ಬೆದರಿಕೆ ಹಾಕಿದ ಬಿಜೆಪಿ ಮುಖಂಡ! - ವ್ಯಕ್ತಿಗೆ ಗನ್ ತೋರಿಸಿ ಬೆದರಿಕೆ ಹಾಕಿದ ಬಿಜೆಪಿ ಮುಖಂಡ

ಅಂಗಡಿ ಇಡುವ ವಿಚಾರಕ್ಕೆ ನಾಗಪ್ಪ ಗಾಣಿಗೇರ ಎಂಬಾತ ಮಡಿವಾಳೆಪ್ಪ ಬೆಳವಲದ ಎಂಬಾತನಿಗೆ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದಾರೆ.

ಅಂಗಡಿ ವಿಚಾರವಾಗಿ ಇಬ್ಬರ ನಡುವೆ ಜಗಳ
ಅಂಗಡಿ ವಿಚಾರವಾಗಿ ಇಬ್ಬರ ನಡುವೆ ಜಗಳ

By

Published : Feb 2, 2022, 9:07 PM IST

Updated : Feb 2, 2022, 9:27 PM IST

ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಬಿಜೆಪಿ ಮುಖಂಡ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ತಾಲೂಕಿನ ಹೊಸ ತೇಗೂರ ಗ್ರಾಮದಲ್ಲಿ ನಡೆದಿದೆ.

ನಾಗಪ್ಪ ಗಾಣಿಗೇರ ಎಂಬಾತ ಮಡಿವಾಳೆಪ್ಪ ಬೆಳವಲದ ಎಂಬಾತನಿಗೆ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದಾರೆ. ಈ ಕುರಿತು ಗರಗ ಠಾಣೆಗೆ‌ ಮಡಿವಾಳೆಪ್ಪ ದೂರು ನೀಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್​​ನಿಂದ ಹೊಡೆಯಲು ಯತ್ನಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

BJP ಮುಖಂಡಗನ್ ತೋರಿಸಿ ಬೆದರಿಕೆ ಹಾಕಿದ

ಎಗ್ ರೈಸ್ ಅಂಗಡಿ ಇಡುವ ಸಂಬಂಧ ನಾಗಪ್ಪ ಮತ್ತು ಮಲಿಕ್ ಎಂಬುವರ ನಡುವೆ ಈ ಜಗಳ ನಡೆದಿತ್ತು. ಈ ಜಗಳ ಬಿಡಿಸಲು ಮಡಿವಾಳಪ್ಪ ಮಧ್ಯೆ ಪ್ರವೇಶಿಸಿದ್ದರು. ಇದರಿಂದ ಕುಪಿತನಾದ ನಾಗಪ್ಪ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.

ಘಟನೆ ಸಂಬಂಧ ಗರಗ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 2, 2022, 9:27 PM IST

ABOUT THE AUTHOR

...view details