ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿಯೂ (Karnataka Council Election) ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು 2ನೇ ದಿನದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾಳೆ ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಯಲಿದೆ.
ಪರಿಷತ್ ಚುನಾವಣೆಯಲ್ಲಿ (Karnataka Council Election) ನಾವು 20 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಅತೀ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಐತಿಹಾಸಿಕ ದಿನ. ರೈತ ಸಮೂಹಕ್ಕೆ ನೆರವು ನೀಡುವ ಕೆಲಸವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 7502 ಚುನಾಯಿತರು ಇಲ್ಲಿದ್ದೀರಿ. ಕನಿಷ್ಟ 5000 ಸಾವಿರ ಜನ ನಮ್ಮ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದರು.
ಜನಸ್ವರಾಜ್ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ಮುಳುಗುತ್ತಿರುವ ಹಡುಗು :ಮಹಿಳಾ ಸಬಲೀಕರಣ ಪ್ರಧಾನಿಗಳ ಅಪೇಕ್ಷೆ ಇದೆ. ಅದನ್ನ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕು. ಹಣ, ಹೆಂಡ, ತೋಳ್ಬಲ, ಜಾತಿ ವಿಷಬೀಜ ಬಿತ್ತಿದ ಕಾಂಗ್ರೆದ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಲೋಕಸಭೆಯಲ್ಲಿ ಕೇವಲ 20 ಜನ ಇದ್ದಾರೆ.
ಮುಂದಿನ ದಿನಗಳಲ್ಲೂ ಬಿಜೆಪಿ ಅಧಿಕಾರದಲ್ಲಿರುತ್ತೆ. ಕಾಂಗ್ರೆಸ್ ಮುಳುಗುತ್ತಿರುವ ಹಡುಗು. ಹೀಗಾಗಿ, ಜನ ಅದರಲ್ಲಿ ಇರಲು ಬಯಸಲ್ಲ. ಪರಿಷತ್ ಚುನಾವಣೆಯಲ್ಲೂ ನಮಗೆ ಬಹುಮತ ಬರಬೇಕಿದೆ. ಅದಕ್ಕೆ ಚುನಾಯಿತ ಪ್ರತಿನಿಧಿಗಳು ಸಹಕಾರ ನೀಡಬೇಕು.
ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ರೆ ನಮ್ಮ ಅಭ್ಯರ್ಥಿ ಬಹುಮತದಿಂದ ಗೆಲ್ತಾರೆ. ಇಡೀ ಪ್ರಪಂಚ ಪ್ರಧಾನಿ ಮೋದಿ ನಾಯಕತ್ವವನ್ನ ಸ್ವಾಗತ ಮಾಡುತ್ತಿದೆ. ಧೀಮಂತ ನಾಯಕ ಮೋದಿ ಪಕ್ಷದ ಸದಸ್ಯರು ನಾವು ಅನ್ನೋದೇ ಹೆಮ್ಮೆಯ ಸಂಗತಿ ಎಂದರು.
ಇಂದು ನಾನು ಅಧಿಕಾರದಲ್ಲಿಲ್ಲ. ಹಿಂದೆ ಮುಂದೆ ನೋಡದೇ ರಾಜೀನಾಮೆ ನೀಡಿ ಬೊಮ್ಮಾಯಿಗೆ ಅನುಕೂಲ ಮಾಡಿಕೊಟ್ಟೆ. ಆದರೆ, ಜನ ನನ್ನ ಕೈ ಬಿಟ್ಟಿಲ್ಲ ಅನ್ನೋದೇ ಸಂತೋಷದ ಸಂಗತಿ. ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸ ಮಾಡುತ್ತೇನೆ.
ಪಕ್ಷ ಬಲ ಪಡಿಸೋಕೆ ರಾಜ್ಯ ಪ್ರವಾಸ ಮಾಡುವೆ. ಎಲ್ಲರೂ ಒಂದಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ :ಸಮಾವೇಶದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ವಿಧಾನ ಪರಿಷತ್ ಚುನಾವಣೆಯಲ್ಲಿ (Karnataka Council Election) 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಆ ಮೂಲಕ ಹೊಸ ಇತಿಹಾಸವನ್ನ ಬರೆಯುತ್ತೆ..
ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ ಕಾಂಗ್ರೆಸ್ ನಾಯಕರು ಕೇವಲ ಚುನಾವಣೆ ಇದ್ದಾಗ ಮಾತ್ರ ಕಾಣುತ್ತಾರೆ. ಆಮೇಲೆ ಎಲ್ಲೂ ಸಹ ಅವರು ಕಾಣೋದಿಲ್ಲ. ಕಾಂಗ್ರೆಸ್ ನಾಯಕರು Part Time leader ಇದ್ದ ಹಾಗೆ. ನಮ್ಮ ಪ್ರಧಾನಿ ಪಾರ್ಟ್ ಟೈಮ್ ಅಲ್ಲ, ಫುಲ್ ಟೈಮ್ ಲೀಡರ್ ಎಂದರು.
ಹಿಂದುಳಿದವರನ್ನ ಕಾಂಗ್ರೆಸ್ ಕಡೆಗಣಿಸಿದೆ, ಹಾಗೆ ಬಿಜೆಪಿ ಮಾಡಿಲ್ಲ. ಕಾಂಗ್ರೆಸ್ ಹಗರಣದ ರಾಜಕಾರಣ ಮಾಡುತ್ತಾ ಬಂದಿದೆ. ಇಡೀ ದೇಶ ಕಲ್ಲಿದ್ದಲು ಸಮಸ್ಯೆಯಿಂದ ಕತ್ತಲಲ್ಲಿ ಮುಳುಗುತ್ತೆ ಅಂತಾ ಕಾಂಗ್ರೆಸ್‌ನವರು ಹೇಳ್ತಿದ್ರು. ಕಲ್ಲಿದ್ದಲು ಸಮಸ್ಯೆಯನ್ನ ಒಂದೇ ದಿನದಲ್ಲಿ ಬಗೆಹರಿಸಿದ್ದಾರೆ. ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರುತ್ತೋ ಆವಾಗೆಲ್ಲಾ ಹಗರಣ ಮಾಡುತ್ತಾ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಬಿಎಸ್ವೈ ಜತೆ Selfieಗಾಗಿ ಮುಗಿಬಿದ್ದ ಜನ :ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ (BJP Janaswaraj Convention in Hubli) ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ Selfie ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬಿದ್ದರು.
ಬಿಎಸ್ವೈ ಜತೆ Selfie ಗಾಗಿ ಮುಗಿಬಿದ್ದ ಜನ ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಬಂದ ಯಡಿಯೂರಪ್ಪ ಅವರೊಂದಿಗೆ Selfie ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಈ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
ಓದಿ:ನಾಳೆಯಿಂದ ಬಿಜೆಪಿ 'ಜನಸ್ವರಾಜ್ ಸಮಾವೇಶ'.. ಪರಿಷತ್ ಕದನಕ್ಕೆ ಕಮಲ ಕಲಿಗಳಿಂದ ಭರ್ಜರಿ ತಾಲೀಮು..