ಕರ್ನಾಟಕ

karnataka

ETV Bharat / state

ಹಿಜಾಬ್ ಹಾಕೋದು ಅವರ ಹಕ್ಕು.. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ವಿಚಾರ ಬಳಸಿಕೊಳ್ಳುತ್ತಿದೆ.. ಜಮೀರ್ ಅಹ್ಮದಖಾನ್ - ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೈಕಮಾಂಡ್​ ನಿರ್ಧಾರಿಸುತ್ತೆ

ಮುಂದಿನ ಸಿಎಂ ಯಾರು ಅನ್ನೋದನ್ನ ಕೇವಲ ನಮ್ಮ ಅಭಿಪ್ರಾಯ ಹೇಳುತ್ತೇವೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಹೈಕಮಾಂಡ್​ ತೆಗೆದು ಕೊಳ್ಳುವ ನಿರ್ಧಾರವೇ ಅಂತಿಮ..

Zamir Ahmed Khan press conference in Hubli
ಹುಬ್ಬಳ್ಳಿಯಲ್ಲಿ ಜಮೀರ್​ ಅಹ್ಮದ್​ಖಾನ್​ ಪತ್ರಿಕಾಗೋಷ್ಠಿ

By

Published : Feb 13, 2022, 5:20 PM IST

ಹುಬ್ಬಳ್ಳಿ :ಹಿಜಾಬ್ ಗಲಾಟೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಕಾರಣ ಗಲಾಟೆ, ಗದ್ದಲಗಳಾದವು. ಸರ್ಕಾರ ಇಂತಹ ವಿಚಾರಗಳಲ್ಲಿ ಸಾಮಾಜಿಕ ನಿಲುವನ್ನು ಹೊಂದಬೇಕು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಂತೆ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್​ ಅಹ್ಮದ್​ ಖಾನ್​ ಪ್ರತಿಕ್ರಿಯೆ ನೀಡಿರುವುದು..

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬರುವ ಮುನ್ನವೇ ಹಿಜಾಬ್ ಹಾಕುತ್ತಿದ್ದಾರೆ. ಮಕ್ಕಳಲ್ಲಿ ಜಾತಿ ಬೀಜ ಹಾಕಿ ರಾಜಕೀಯ ಮಾಡುತ್ತಿದ್ದಾರೆ. ತೀರ್ಪು ನೂರಕ್ಕೆ ನೂರು ನಮ್ಮ ಪರ ಬರುತ್ತೆ ಅನ್ನೋ ನಂಬಿಕೆ ಇದೆ.

ಬಿಜೆಪಿಯವರು ರಾಜಕೀಯ ಲಾಭಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹಿಜಾಬ್ ಹಾಕೋದು ಅವರ ರೈಟ್ಸ್, ನೂರಾರು ವರ್ಷದಿಂದ ಹಾಕಿಕೊಂಡು ಬರುತ್ತಿದ್ದಾರೆ ಎಂದರು.

ರಾಮಮಂದಿರವೇ ಬೇರೆ ಹಿಜಾಬ್​ ವಿಚಾರವೇ ಬೇರೆ. ರಾಮಮಂದಿರ ತೀರ್ಪು ಬಂದಾಗ ನಾವು ಸ್ವಾಗತ ಮಾಡಿದ್ದೆವು. ನ್ಯಾಯಾಂಗ ನೀಡುವ ತೀರ್ಪನ್ನು ಅನುಸರಿಸುತ್ತೇವೆ ಎಂದರು.

ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರಬೇಕು ಅಂತಾ ಈಗ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಜನರಿಗೆ ಒಳ್ಳೆಯದಾಗುತ್ತದೆ. ಜನರೇ ಮುಂದಿನ ಅಧಿಕಾರವನ್ನು ನಮಗೆ ನೀಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಹೈಕಾಮಾಂಡ್​ ನಿರ್ಧಾರವೇ ಅಂತಿಮ :ಮುಂದಿನ ಸಿಎಂ ಯಾರು ಅನ್ನೋದನ್ನ ಕೇವಲ ನಮ್ಮ ಅಭಿಪ್ರಾಯ ಹೇಳುತ್ತೇವೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಹೈಕಮಾಂಡ್​ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ.

ಓದಿ:ಯಾವ್ನೋ ಈಶ್ವರಪ್ಪ ಅಂತೆ, ಅವನೊಬ್ಬ ತಲೆಕೆಟ್ಟ ಈಶ್ವರಪ್ಪ.. ಏಕವಚನದಲ್ಲೇ ಡಿಕೆಶಿ ವಾಗ್ದಾಳಿ

For All Latest Updates

TAGGED:

ABOUT THE AUTHOR

...view details