ಕರ್ನಾಟಕ

karnataka

ಬಿಜೆಪಿ ನೈತಿಕ ಶಕ್ತಿ ಕಳೆದುಕೊಂಡಿದೆ: ಹೆಚ್. ಕೆ. ಪಾಟೀಲ್

By

Published : Nov 8, 2019, 5:23 PM IST

ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು ಬಿಜೆಪಿ ನೈತಿಕ ಶಕ್ತಿ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಕಾಂಗ್ರೆಸ್​ನ ಸ್ಥಿತಿ ಅಧೋಗತಿಯೋ ಅಥವಾ ಕಾಂಗ್ರೆಸ್ ನಿಲುವು ಸರಿ ಇದೆಯೋ ಅನ್ನೋದನ್ನ ಜನ ನಿರ್ಧರಿಸುತ್ತಾರೆಂದು ಬಿಜೆಪಿಗರಿಗೆ ಟಾಂಗ್​ ನೀಡಿದ್ದಾರೆ.

ಬಿಜೆಪಿ ನೈತಿಕ ಶಕ್ತಿ ಕಳೆದುಕೊಂಡಿದೆ....ಎಚ್.ಕೆ. ಪಾಟೀಲ್ ವ್ಯಂಗ್ಯ

ಧಾರವಾಡ: ಕಾಂಗ್ರೆಸ್ ವಿಡಿಯೋ ಪ್ರಕರಣದಲ್ಲಿ ರಾಜಕಾರಣ ಮಾಡುತ್ತಿದೆ ಎನ್ನುವ ಸಚಿವ‌ ಜಗದೀಶ್ ಶೆಟ್ಟರ್ ಹೇಳಿಕೆಗೆ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ತಿರುಗೇಟು ನೀಡಿದ್ದಾರೆ. ಬಿಜೆಪಿಯೇ ನೈತಿಕ ಶಕ್ತಿ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ನೈತಿಕ ಶಕ್ತಿ ಕಳೆದುಕೊಂಡಿದೆ....ಹೆಚ್.ಕೆ. ಪಾಟೀಲ್ ಟೀಕೆ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಪ್ರಕರಣದಲ್ಲಿ ರಾಜಕಾರಣ ಅನ್ನೋದು ಬೇಜವಾಬ್ದಾರಿತನದ ಹೇಳಿಕೆಯಾಗಿದೆ. ಯಡಿಯೂರಪ್ಪನವರೇ ಈ ಕುರಿತು ಒಪ್ಪಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವರು ಅದರಲ್ಲಿ ಭಾಗಿಯಾಗಿದ್ದಾರೆ ಅನ್ನೋದು ನಾವು ಮಾಡಿದ ಆರೋಪ‌ ಅಲ್ಲ, ಬಿಎಸ್​ವೈ ಆಡಿದ ಮಾತುಗಳು ಹಾಗಿವೆ ಎಂದು ಹರಿಹಾಯ್ದರು.

ಅಲ್ಲದೇ, ಬಿಜೆಪಿಯಲ್ಲಿರುವವರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ, ಬಿಜೆಪಿಯವರು ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಳ್ಳಬೇಕು. ಒಪ್ಪಲ್ಲ ಅಂದ್ರೆ ನೀವು ನಿಮ್ಮ ಸ್ಥಾನದಿಂದ ಕೆಳಗಿಳಿಯಬೇಕು. ನಿಮಗೆ ಅಧಿಕಾರ ನಡೆಸಬೇಕಾದ್ರೆ ನಂಬರ್ ಅಷ್ಟೇ ಅಲ್ಲ, ರಾಜಕೀಯ ನೈತಿಕ ಶಕ್ತಿಯೂ ಬೇಕು. ಆ ನೈತಿಕ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿದ್ದೀರಿ ಎಂದು ದೂರಿದರು. ಅಲ್ಲದೇ, ಕಾಂಗ್ರೆಸ್ ಅಧೋಗತಿಗೆ ಬಂದಿದೆಯೋ ಅಥವಾ ಕಾಂಗ್ರೆಸ್ ನಿಲುವು ಸರಿ ಇದೆಯೋ ಅನ್ನೋದನ್ನ ಜನ ನಿರ್ಧರಿಸುತ್ತಾರೆ ಎಂದು ಹೆಚ್​ ಕೆ ಪಾಟೀಲ್​ ಇದೇ ವೇಳೆ ಹೇಳಿದ್ರು.

ಇನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಿಎಂ ಹೇಳಿಕೆ ಕುರಿತು ತನಿಖೆ ಮಾಡಬೇಕು ಎಂದಿದ್ದಾರೆ. ಇಗಾಗಲೇ ಸಿಎಂ ತನಿಖೆಗೆ ಒಳಗಾಗಿದ್ದಾರೆ, ಇದರರ್ಥ ಅವರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಂತಾಗಿದೆ. ಜೊತೆಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ‌ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ಕೇಂದ್ರ ಗೃಹ ಸಚಿವರ ವಿರುದ್ಧ ತನಿಖೆ ಬೇಡ ಅನ್ನೋದು ರಾಜಕೀಯವಾಗಿ ನುಣುಚಿಕೊಳ್ಳುವ ಕೆಲಸ ಎಂದು ಹೆಚ್​ ಕೆ ಪಾಟೀಲ್​ ಆರೋಪಿಸಿದ್ರು.

ABOUT THE AUTHOR

...view details