ಕರ್ನಾಟಕ

karnataka

ETV Bharat / state

ರೇವಣ್ಣ ಅಲ್ಲ ರಾವಣ, ಮೇ.23 ರ ನಂತರ ಬಿಎಸ್​ವೈ​ ಸಿಎಂ: ಕೆ.ಎಸ್.ಈಶ್ವರಪ್ಪ ಭವಿಷ್ಯ - undefined

ಕುಂದಗೋಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಕೆ.ಎಸ್.ಈಶ್ವರಪ್ಪ ಭಾಷಣದ ಉದ್ದಕ್ಕೂ ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದುರು.

ಕೆ.ಎಸ್.ಈಶ್ವರಪ್ಪ

By

Published : May 5, 2019, 8:48 PM IST

ಹುಬ್ಬಳ್ಳಿ:ಮಣ್ಣಿನ ಮಗ ಎಂದು ಯಾರು ನಿಮ್ಮನ್ನು ಕರೆದೋರು, ಸಾಲಮನ್ನಾ ಹೆಸರಲ್ಲಿ ರೈತರಿಗೆ ದ್ರೋಹ ಮಾಡಿದವರು ಮಣ್ಣಿನ ಮಕ್ಕಳಲ್ಲ, ನಿಜವಾದ ಮಣ್ಣಿನ ಮಗ ಬಿ.ಎಸ್.ಯಡಿಯೂರಪ್ಪ. ಅವರೇ ಮೇ.23 ರ ನಂತರ ರಾಜ್ಯದ ಸಿಎಂ ಆಗುವರು ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಕುಂದಗೋಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೇ.23 ರ ನಂತರ ಮುಂದಿನ ಮುಖ್ಯಮಂತ್ರಿ ಆಗಲಿರುವ ಯಡಿಯೂರಪ್ಪನವರೇ ಎಂದು ಭಾಷಣ ಪ್ರಾರಂಭಿಸಿದ ಕೆ.ಎಸ್.ಈಶ್ವರಪ್ಪ ಭಾಷಣದ ಉದ್ದಕ್ಕೂ ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದುರು.

ಕೆ.ಎಸ್.ಈಶ್ವರಪ್ಪ

ರೇವಣ್ಣ ಅಲ್ಲ ಅವರು ರಾವಣ‌. ಡಿ‌.ಕೆ. ಶಿವಕುಮಾರ್ ಅಲ್ಲ ಕೇಡಿ ಶಿವಕುಮಾರ್ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡುವವರಿಗೆ ನಾಲಗೆಗೆ ಏನು ಬೀಳಬೇಕು. ಸಿದ್ದರಾಮಯ್ಯ ನಾಚಿಕೆ ಮಾನ ಮರ್ಯಾದೆ ಇಲ್ಲದ ವ್ಯಕ್ತಿ ಅವರಿಗೆ ತಲೆ ಕೆಟ್ಟಿರಬೇಕು ಎಂದರು.

ಪುಲ್ವಾಮಾ ದಾಳಿಯಾದ ಹನ್ನೊಂದು ದಿನಕ್ಕೆ ಉಗ್ರರನ್ನು ಬಲಿ ತೆಗೆದುಕೊಂಡ ದೇಶಭಕ್ತರು ನಾವು. ಸಿದ್ದರಾಮಯ್ಯ ಯಾವ ಲೆಕ್ಕ ಅವರು ಉಗ್ರರಿಗೆ ಸಮ ಎಂದು ಸಿದ್ದರಾಮಯ್ಯರನ್ನು ಉಗ್ರರಿಗೆ ಹೋಲಿಕೆ ಮಾಡಿದರು. ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಲಿಂಗಾಯತರು ಲಿಂಗಾಯತರನ್ನು ಮರಿಬೇಡಿ ಅಂತಿದ್ರು ಇವಾಗ ಯಾವ ಬಾಯಿಯಿಂದ ಮತ ಕೇಳುತ್ತಾರೆ.

ಕುರುಬ, ಲಿಂಗಾಯತ, ಒಕ್ಕಲಿಗರ ಹೆಸರಲ್ಲಿ ಮತ ಕೇಳುವ ಇವರು ಜಾತಿವಾದಿಗಳಲ್ಲವೇ ಎಂದು ಪ್ರಶ್ನಿಸಿ. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details