ಧಾರವಾಡ: ಜಿಲ್ಲಾ ಕೇಂದ್ರ ಕಾರಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲಿನಲ್ಲಿಯೇ ಬರ್ತ್ಡೇ ಪಾರ್ಟಿ: ಸೆಲೆಬ್ರೆಷನ್ ಫೋಟೋ ವೈರಲ್ - ಧಾರವಾಡ
ಸಾಮಾನ್ಯವಾಗಿ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಆತಂಕದಲ್ಲಿರುವುದನ್ನು ಕಾಣಬಹುದು. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತಹ ಘಟನೆ ಧಾರವಾಡದ ಜಿಲ್ಲಾ ಕೇಂದ್ರ ಕಾರಗೃಹದಲ್ಲಿ ನಡೆದಿದ್ದು, ಈದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲಿನಲ್ಲಿಯೇ ಆಚರಿಸಿಕೊಂಡ ಬರ್ತ್ ಡೇ ಪಾರ್ಟಿ
ಹುಬ್ಬಳ್ಳಿಯಲ್ಲಿ ಸಬ್ ಜೈಲ್ ಬಳಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಗಣೇಶ್ ಜಾಧವ್ ಎಂಬಾತನೇ ಜೈಲಿನಲ್ಲಿ ಪಾರ್ಟಿ ಮಾಡಿಕೊಂಡ ವ್ಯಕ್ತಿ. ಕೇಕ್ ಕಟ್ ಮಾಡಿ ಬರ್ತ್ಡೇ ಸೆಲೆಬ್ರೆಷನ್ ಮಾಡಿಕೊಂಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಷ್ಟೇ ಅಲ್ಲದೇ ಗಣೇಶ್ ಬರ್ತ್ ಡೇಯಲ್ಲಿ ಕೈದಿಗಳು ಸಹ ಪಾರ್ಟಿ ಮಾಡಿದ್ದು, ಈ ರೀತಿ ಜೈಲಿನಲ್ಲಿಯೇ ರಾಜಾರೋಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಚಾರಾಣಾಧೀನ ಕೈದಿಗಳ ನಡೆಯನ್ನು ಕಂಡು ಸಾರ್ವಜನಿಕ ವಲಯದಲ್ಲಿ ಇದೀಗ ಆಕ್ರೋಶ ವ್ಯಕ್ತವಾಗಿದೆ.