ಹುಬ್ಬಳ್ಳಿ :ಅವಳಿ ನಗರ ಬೆಳೆದಂತೆ ಇಲ್ಲಿನ ಕ್ರೈಂ ಚಟುವಟಿಕೆ ಕೂಡ ಹೆಚ್ಚಾಗ್ತಿವೆ. ಅದರಲ್ಲಿಯೂ ಇತ್ತೀಚೆಗೆ ಇಲ್ಲಿ ಬೈಕ್ ಕಳ್ಳತನ ಹೆಚ್ಚಾಗುತ್ತಿವೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ ಬೈಕ್ಗಳಿಂದ ಹಿಡಿದು ಜನನಿಬಿಡ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳಲ್ಲಿ ಕಳ್ಳರು ಕೈಚಳಕ ತೋರಿಸುತ್ತಿದ್ದಾರೆ.
ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ಬೈಕ್ ಕಣ್ಮರೆಯಾಗಿರುತ್ತದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳ ಜನ ಹುಬ್ಬಳ್ಳಿ ನಗರಕ್ಕೆ ಬೈಕ್ ತೆಗೆದುಕೊಂಡು ಬರಲು ಹೆದರುತ್ತಿದ್ದಾರೆ. ಇದಕೆಲ್ಲ ಕಾರಣ ನಗರದಲ್ಲಿ ಕೆಟ್ಟು ನಿಂತಿರುವ ಸಿಸಿಟಿವಿಗಳು ಮತ್ತು ಸರಿಯಾದ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲದಿರುವುದು ಅಂತಾರೆ ಸ್ಥಳೀಯರು.
ಕಳೆದ ಮೂರು ವರ್ಷಗಳಲ್ಲಿ ಅವಳಿ ನಗರದಲ್ಲಿ ಬೈಕ್ ಕಳ್ಳತನ ಸಂಖ್ಯೆ ಹೆಚ್ಚುತ್ತಲೇ ಇದೆ. 2018ರಲ್ಲಿ ಒಟ್ಟು 177 ಕೇಸ್ ದಾಖಲಾಗಿದ್ದವು. 2019ರಲ್ಲಿ ಇದರ ಸಂಖ್ಯೆ ಜಾಸ್ತಿಯಾಗಿ 239ಕ್ಕೆ ಏರಿತ್ತು. 2020ರಲ್ಲಿ 226 ಬೈಕ್ ಕಳ್ಳತನವಾಗಿವೆ. ಇದರಲ್ಲಿ ಕೆಲವು ವಾಪಸ್ ಪೊಲೀಸರ ಕೈಗೆ ಸಿಕ್ಕರೇ, ಇನ್ನುಳಿದವು ಪತ್ತೆಯಾಗಿಲ್ಲ.