ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ..! - hubli crime news
ಹುಬ್ಬಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ ಹಿರೋ ಹೊಂಡಾ, ಸ್ಪ್ಲೆಂಡರ್ ಪ್ರೋ, ಹಿರೋ ಹೊಂಡಾ ಪ್ರೋ, ಸ್ಪ್ಲೆಂಡರ್ ಸೇರಿದಂತೆ ನಾಲ್ಕು ಬೈಕುಗಳು ವಶಕ್ಕೆ ಪಡೆದಿದ್ದಾರೆ.
ಧಾರವಾಡ ವಿದ್ಯಾಗಿರಿ ನಿವಾಸಿ ಅಪ್ಪಯ್ಯ ಅಲಿಯಾಸ್ ಅಪ್ಯಾ ರಾಚಯ್ಯ ಬೆಂಡಿಗೇರಿಮಠ ಎಂಬಾತ ಬಂಧಿತನಾಗಿದ್ದು, ಆರೋಪಿಯಿಂದ ಹಿರೋ ಹೊಂಡಾ, ಸ್ಪ್ಲೆಂಡರ್ ಪ್ರೋ, ಹಿರೋ ಹೊಂಡಾ ಪ್ರೋ, ಸ್ಪ್ಲೆಂಡರ್ ಸೇರಿದಂತೆ ನಾಲ್ಕು ಬೈಕುಗಳು ವಶಕ್ಕೆ ಪಡೆದಿದ್ದಾರೆ. ಬೈಕ್ಗಳ ಒಟ್ಟು ಮೌಲ್ಯ 1 ಲಕ್ಷ ರೂಪಾಯಿಯಾಗಿದೆ ಎಂದು ಪೊಲೀಸರಿಂದ ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಠಾಣೆಯ ಸುರೇಶ ಕುಂಬಾರ, ಪಿಎಸ್‌ಐ ಸದಾಶಿವ ಕಾನಟ್ಟಿ, ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಡಿ.ವಾಯ್ ಭಜಂತ್ರಿ, ಎಸ್.ಪಿ.ಕಾಳೆ, ಹೆಚ್.ಬಿ.ಮಾಡೊಳ್ಳಿ, ಶರಣಪ್ಪ ಕರೆಯಂಕಣ್ಣವರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.