ಕರ್ನಾಟಕ

karnataka

ETV Bharat / state

ನಡು ರಸ್ತೆಯಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ ವಿಡಿಯೋ ವೈರಲ್

ಹುಬ್ಬಳ್ಳಿ ಯುವಕ ನಗರದ ನಡು ರಸ್ತೆಯಲ್ಲಿಯೇ ಬೈಕ್‌ ವೀಲಿಂಗ್ ಮಾಡಿದ್ದು, ಇದರಿಂದಾಗಿ ಸಾರ್ವಜನಿಕರು ಭಯಪಡುವಂತಾಗಿದೆ.

ಬೈಕ್ ವೀಲಿಂಗ್

By

Published : Nov 15, 2019, 6:54 AM IST

ಹುಬ್ಬಳ್ಳಿ:ಬೈಕ್‌ನ್ನು ವೇಗವಾಗಿ ಓಡಿಸುವುದು, ಬೈಕ್‌ನಲ್ಲಿ ಸ್ಟಂಟ್ ಮಾಡುವುದು, ಬೈಕ್‌ ವ್ಹೀಲಿಂಗ್​ ಮಾಡುವುದು ಇಂದು ಯುವಕರ ಫ್ಯಾಷನ್ ಆಗಿದ್ದು, ಹುಬ್ಬಳ್ಳಿಯಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲಿಯೇ ಬೈಕ್‌ ವ್ಹೀಲಿಂಗ್ ಮಾಡಿದ ವಿಡಿಯೋ ವೈರಲ್​ ಆಗಿದೆ.

ಹುಬ್ಬಳ್ಳಿಯಲ್ಲಿ ನಡು ರಸ್ತೆಯಲ್ಲಿ ಬೈಕ್ ವ್ಹೀಲಿಂಗ್

ನಗರದ ಕೇಶ್ವಾಪುರದ ಫಾತಿಮಾ ಕಾಲೇಜು ಹತ್ತಿರದ ರಸ್ತೆಯಲ್ಲಿ ಯುವಕನೊಬ್ಬ ಬೈಕ್ ವ್ಹೀಲಿಂಗ್ ಮಾಡಿದ್ದು, ಇದರಿಂದಾಗಿ ಇತರೆ ವಾಹನ ಸವಾರರಿಗೆ ಆತಂಕ ಪಡುವಂತಾಗಿದೆ. ಇದೇ ರಸ್ತೆಯ ಪಕ್ಕದಲ್ಲಿ ಕಾಲೇಜುಗಳಿದ್ದು, ಹುಡುಗಿಯರನ್ನು ಮೆಚ್ಚಿಸಲು ಪುಂಡ ಯುವಕರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಸಾರ್ವಜನಿಕ ಪ್ರದೇಶ, ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್‌ ಸ್ಟಂಟ್‌ ಮಾಡುವುದು ಅಪರಾಧವಾಗಿದ್ದು, ಈ ಬಗ್ಗೆ ಕೆಲವರಿಗೆ ಭಯವೇ ಇಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟ ಪೊಲೀಸ್​ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಬೈಕ್​ ವ್ಹೀಲಿಂಗ್​ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ.

ABOUT THE AUTHOR

...view details