ಹುಬ್ಬಳ್ಳಿ:ಬೈಕ್ ಸ್ಕಿಡ್ ಆಗಿ ಬಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಕುಂದಗೋಳ ಕ್ರಾಸ್ ಎನ್ಹೆಚ್-4 ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೈಕ್ ಸ್ಕಿಡ್: ಜಿಮ್ಗೆ ಹೊರಟಿದ್ದ ಯುವಕ ರಸ್ತೆ ಅಪಾಘಾತದಲ್ಲಿ ಸಾವು - ಕುಂದಗೋಳ ಕ್ರಾಸ್ ಬೈಕ್ ಅಪಘಾತ ನ್ಯೂಸ್
ಬೈಕ್ ಸ್ಕಿಡ್ ಆಗಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ಹೊರವಲಯದ ಕುಂದಗೋಳ ಕ್ರಾಸ್ ಎನ್ಹೆಚ್-4 ಹೆದ್ದಾರಿಯಲ್ಲಿ ಸಂಭವಿಸಿದೆ.

ಬೈಕ್ ಸ್ಕಿಡ್: ಸವಾರ ಬಚಾವ್, ಹಿಂಬದಿ ಕುಳಿತವ ಸ್ಥಳದಲ್ಲೇ ಸಾವು
ಬೈಕ್ ಸ್ಕಿಡ್: ಸವಾರ ಬಚಾವ್, ಹಿಂಬದಿ ಕುಳಿತಿದ್ದವ ಸ್ಥಳದಲ್ಲೇ ಸಾವು
ಬೊಮ್ಮಸಮುದ್ರದ ನಿವಾಸಿ ಪೀರಪ್ಪ ಓಜ್ಜನವರ (26) ಮೃತ ಯುವಕ. ಈತ ಪ್ರತಿನಿತ್ಯ ಜಿಮ್ ಮಾಡಲು ನಗರಕ್ಕೆ ಆಗಮಿಸುತ್ತಿದ್ದ. ಅದೇ ರೀತಿ ಇಂದು ಕೂಡ ಸ್ನೇಹಿತ ಮಂಜುನಾಥ ಹರಿಜನನೊಂದಿಗೆ ಬೈಕ್ ಮೇಲೆ ಬರುವಾಗ ಕುಂದಗೋಳ ಕ್ರಾಸ್ ಹತ್ತಿರ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಪೀರಪ್ಪನ ತಲೆಗೆ ಹೊಡೆತ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಮಂಜುನಾಥ ಹರಿಜನಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.