ಕರ್ನಾಟಕ

karnataka

ETV Bharat / state

ಕುಕ್ಕೆಯಿಂದ ಮರಳುವಾಗ ಹುಬ್ಬಳ್ಳಿಯಲ್ಲಿ ಬೈಕ್​ ಸ್ಕಿಡ್​: ಊರು ತಲುಪುವ ಮುನ್ನವೇ ಇಬ್ಬರು ಯುವಕರು ಸಾವು - Hubli Accident News

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದ ಯುವಕರಿಬ್ಬರು ತಮ್ಮ ಊರನ್ನು ತಲುಪುವ ಮೊದಲೇ ಸಾವನ್ನಪ್ಪಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ಸಂಭವಿಸಿದೆ. ಬೈಕ್ ಸ್ಕಿಡ್​ ಆಗಿ ಈ ಇಬ್ಬರು ಮೃತಪಟ್ಟಿದ್ದಾರೆ.

hubli
ಬೈಕ್​ ಸ್ಕಿಡ್

By

Published : Jul 19, 2021, 11:45 AM IST

Updated : Jul 19, 2021, 1:38 PM IST

ಹುಬ್ಬಳ್ಳಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯದ ದೇವಾಲಯಕ್ಕೆ ತೆರಳಿ ಹಿಂತಿರುಗಿ ಬರುವಾಗ ಬೈಕ್​ ಸ್ಕಿಡ್​ ಆಗಿದ್ದು, ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಆಕ್ಸ್‌ಫರ್ಡ್ ಕಾಲೇಜು ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಸಂತೋಷ (23) ಮತ್ತು ಭೀಮಾನಂದ ಮಾರುತಿಗಸ್ತಿ ಮೃತರು. ಇವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ನಾಗ ದೇವರ ದರ್ಶನ ಪಡೆದು ತಮ್ಮೂರಿಗೆ ಹಿಂದಿರುಗುತ್ತಿದ್ದರು. ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ಬೈಕ್ ಸ್ಕಿಡ್​ ಆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಬೈಕ್​ ಸ್ಕಿಡ್

ಯುವಕರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಲಾಗಿದೆ‌. ಘಟನೆ ನಡೆದ ಸ್ಥಳಕ್ಕೆ ಪೂರ್ವ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ.

Last Updated : Jul 19, 2021, 1:38 PM IST

ABOUT THE AUTHOR

...view details