ಹುಬ್ಬಳ್ಳಿ: ಹೂ ಖರೀದಿಸುವ ಕಾರಣ ನೀಡಿ 6 ಕಿಲೋ ಮೀಟರ್ ದೂರ ಸ್ಕೂಟರ್ ಮೂಲಕ ಸಂಚರಿಸಿದ ಯುವತಿ ಚನ್ನಮ್ಮ ಸರ್ಕಲ್ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಹೂ ಖರೀದಿಸಲು 6 ಕಿ.ಮೀ ದೂರ ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವತಿ - ಹುಬ್ಬಳ್ಳಿ ಜನತಾ ಕರ್ಫ್ಯೂ
ಲಾಕ್‌ಡೌನ್ ಸಂದರ್ಭದಲ್ಲಿ ನಿಗದಿಪಡಿಸಿದ ಕಾಲಾವಧಿ, ತುರ್ತುಸೇವೆಗಳನ್ನು ಹೊರತುಪಡಿಸಿ ಯಾರೂ ಮನೆಯಿಂದ ಹೊರಬರುವಂತಿಲ್ಲ. ಆದ್ರೆ ಹೂ ಖರೀದಿ ನೆಪದಲ್ಲಿ ಇಲ್ಲೊಬ್ಬಳು ಯುವತಿ ಆರು ಕಿಲೋ ಮೀಟರ್ ದೂರ ಸಂಚರಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಳು. ಮುಂದೇನಾಯ್ತು ಗೊತ್ತೇ?.
ಹುಬ್ಬಳ್ಳಿಯಲ್ಲಿ ಹೂ ಖರೀದಿಸಲು 6 ಕಿ.ಮೀ ದೂರ ಬಂದ ಯುವತಿಯ ಬೈಕ್ ಸೀಜ್
ಲಿಂಗರಾಜನಗರದಿಂದ ಜನತಾ ಬಜಾರ್ಗೆ ಹೂ ಖರೀದಿಸಲು ಬಂದಿರುವುದಾಗಿ ಯುವತಿ ಪೊಲೀಸರಿಗೆ ಹೇಳಿದ್ದಾಳೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಯುವತಿಯ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದರು.
ಯುವತಿ ಪರಿಪರಿಯಾಗಿ ಬೇಡಿಕೊಂಡರೂ ಉಪನಗರ ಠಾಣೆ ಪೊಲೀಸರು ಸ್ಕೂಟರ್ ಮರಳಿ ನೀಡಲಿಲ್ಲ.