ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಉಲ್ಲಂಘನೆ: 70 ಕ್ಕೂ ಹೆಚ್ಚು ಬೈಕ್ ಸೀಜ್​, 40 ಸಾವಿರ ದಂಡ ವಸೂಲಿ - ಧಾರವಾಡದಲ್ಲಿ ಲಾಕ್​ಡೌನ್​ ಉಲ್ಲಂಘನೆ

ಲಾಕ್​ಡೌನ್​ ಉಲ್ಲಂಘಿಸಿದ ಹಿನ್ನೆಲೆ ಧಾರವಾಡದಲ್ಲಿ ಸುಮಾರು 70 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

bike seize in Dharwad
ಬೈಕ್

By

Published : Apr 3, 2020, 11:28 PM IST

ಧಾರವಾಡ: ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಕ್​ಡೌನ್​ ಉಲ್ಲಂಘಿಸಿದ ಹಿನ್ನೆಲೆ ಕಳೆದ ಎರಡು ದಿನಗಳಲ್ಲಿ ಪೊಲೀಸರು ಸುಮಾರು 70 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರ ಆದೇಶದಂತೆ ಡಿವೈಎಸ್ಪಿ ರವಿ ನಾಯಕ್ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪಿಎಸ್ಐ ಮಹೇಂದ್ರ ಕುಮಾರ ನಾಯಕ ಅವರು ನಿಷೇಧಾಜ್ಞೆ ಉಲ್ಲಂಘಿಸಿ, ಸಕಾರಣವಿಲ್ಲದೇ ರಸ್ತೆಗಿಳಿದ ಹೆಬ್ಬಳ್ಳಿಯ 20, ಅಮ್ಮಿನಭಾವಿಯ 17, ನರೇಂದ್ರದ 15 ಮತ್ತು ನಿಗದಿಯ 10 ವಾಹನಗಳು ಸೇರಿದಂತೆ ವಿವಿಧ ಹಳ್ಳಿಗಳಲ್ಲಿನ 70 ಕ್ಕೂ ಹೆಚ್ಚು ವಾಹನಗಳನ್ನು ಸೀಜ್​ ಮಾಡಿದ್ದಾರೆ.

ಸಂಚಾರ ನಿಯಮ ಪಾಲಿಸದೆ, ಸುಖಾ ಸುಮ್ಮನೆ ರಸ್ತೆಗಿಳಿದು ವಾಹನ ಚಲಾಯಿಸುತ್ತಿದ್ದ ವಾಹನ ಸವಾರರಿಂದ 40 ಸಾವಿರ ರೂಪಾಯಿಗೂ ಅಧಿಕ ಮೊತ್ತದ ದಂಡ ವಸೂಲು ಮಾಡಿದ್ದಾರೆ ಎಂದು ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details