ಕರ್ನಾಟಕ

karnataka

ETV Bharat / state

ಮೂವರು ಚಾಲಾಕಿ ಬೈಕ್ ಕಳ್ಳರು ಅಂದರ್: ಹಳೆ ಬೈಕ್ ಮೇಲೆ ಖದೀಮರ ಕರಾಮತ್ತು - ಕೇಶ್ವಾಪೂರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಜಗದೀಶ ಹಂಚನಾಳ

ಹಳೇ ವಾಹನಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕೇಶ್ವಾಪೂರ ಠಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೂವರು ಚಾಲಾಕಿ ಬೈಕ್ ಕಳ್ಳರು ಅಂದರ್
ಮೂವರು ಚಾಲಾಕಿ ಬೈಕ್ ಕಳ್ಳರು ಅಂದರ್

By

Published : Dec 2, 2022, 9:38 PM IST

ಹುಬ್ಬಳ್ಳಿ:ಇಲ್ಲಿನರೈಲ್ವೆ ಯೂನಿಯನ್‌ ಆಫೀಸ್ ಹತ್ತಿರ ಲಾಕ್ ಮಾಡಿ ನಿಲ್ಲಿಸಿದ್ದ ಮೋಟರ್​ ಸೈಕಲ್​ಗಳು ಮೇಲಿಂದ ಮೇಲೆ ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣಗಳು ಕೇಶ್ವಾಪೂರ ಠಾಣೆಯಲ್ಲಿ ದಾಖಲಾಗಿದ್ದವು. ಪ್ರಕರಣದ ಜಾಡು ಹಿಡಿದು ಹೊರಟ ಕೇಶ್ವಾಪೂರ ಪೊಲೀಸರು ಮೂವರು ಬೈಕ್ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.

ಕೇಶ್ವಾಪೂರ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ಜಗದೀಶ ಹಂಚನಾಳ ನೇತೃತ್ವದ ತಂಡ ಮೂವರು ಆರೋಪಿತರನ್ನು ಹಿಡಿದು ವಿಚಾರಿಸಿದಾಗ ಆರೋಪಿತರು ಒಟ್ಟು 09 ಮೋಟರ್ ಸೈಕಲ್​ಗಳನ್ನು ಕಳ್ಳತನ ಮಾಡಿರುವ ಬಗ್ಗೆ ಹೇಳಿದ್ದು, ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಆರೋಪಿತರು ಹಳೇ ವಾಹನಗಳಿಗೆ ಕಾಗದ ಪತ್ರಗಳು ಸರಿಯಾಗಿ ಇರುವುದಿಲ್ಲ. ಅವುಗಳನ್ನು ಕಳ್ಳತನ ಮಾಡಿದರೆ ಮಾಲೀಕರು ಠಾಣೆಯಲ್ಲಿ ದೂರು ನೀಡುವುದಿಲ್ಲ ಎಂದು ಹಳೇ ವಾಹನಗಳನ್ನೇ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದರು ಎಂಬುವಂತಹ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.

ಓದಿ:ಸರ್ಕಾರಿ ಶಾಲೆಗಳಲ್ಲಿ ಕಳ್ಳತನ ಪ್ರಕರಣ: ನಾಲ್ವರು ಕಳ್ಳರ ಬಂಧನ

ABOUT THE AUTHOR

...view details