ಹುಬ್ಬಳ್ಳಿ: ಚಿಕ್ಕ ಮಕ್ಕಳನ್ನು ಬೈಕ್ ಮೇಲೆ ಕರೆದುಕೊಂಡು ಹೋಗುವಾಗ ಎಚ್ಚರದಿಂದ ಇರಬೇಕು. ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿ ಬೇರೆಯವರ ಜೊತೆ ಮಾತನಾಡುವಾಗ, ಬಾಲಕ ವಾಹನದ ಎಕ್ಸಿಲೇಟರ್ ಅನ್ನು ಜೋರಾಗಿ ಹಿಡಿದ ಪರಿಣಾಮ, ಬೈಕ್ ವೇಗವಾಗಿ ಚಲಿಸಿ ತಗ್ಗು ಪ್ರದೇಶದಲ್ಲಿ ಬಿದ್ದಿರುವ ಘಟನೆ ನಗರದ ಚಂದ್ರನಾಥ ನಗರದ ಗಣೇಶ ಮಂದಿರದ ಬಳಿ ನಡೆದಿದೆ.
ಮಕ್ಕಳನ್ನು ಬೈಕ್ನಲ್ಲಿ ಕರೆದುಕೊಂಡು ಹೋಗುವಾಗ ಎಚ್ಚರ.. ವಿಡಿಯೋ - ಹುಬ್ಬಳ್ಳಿಯಲ್ಲಿ ರಸ್ತೆ ಅಪಘಾತ
ಚಂದ್ರನಾಥ ನಗರದ ಗಣೇಶ ಮಂದಿರದ ಬಳಿ ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿ ಬೇರೆಯವರ ಜೊತೆ ಮಾತನಾಡುವಾಗ, ಬಾಲಕ ವಾಹನದ ಎಕ್ಸಿಲೇಟರ್ ಅನ್ನು ಜೋರಾಗಿ ಹಿಡಿದ ಪರಿಣಾಮ, ಬೈಕ್ ವೇಗವಾಗಿ ಚಲಿಸಿ ತಗ್ಗು ಪ್ರದೇಶದಲ್ಲಿ ಬಿದ್ದಿದೆ..
ಸಿಸಿಟಿವಿ ವಿಡಿಯೋ
ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.