ಕರ್ನಾಟಕ

karnataka

ETV Bharat / state

ವಿಜಯಪುರ ಮಗು ಮಾರಾಟ ಪ್ರಕರಣಕ್ಕೆ ಟ್ವಿಸ್ಟ್​: ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಶಿಶು ಪತ್ತೆ - ಮಗು ಮಾರಾಟ ಪ್ರಕರಣ

ವಿಜಯಪುರದಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುದ್ದಿಯಾಗಿದ್ದ ನವಜಾತ ಶಿಶು ಮಾರಾಟ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶಿಶು ಪತ್ತೆಯಾಗಿದೆ.

big-twist-for-vijayapura-child-sale-case
ವಿಜಯಪುರ ಶಿಶು ಮಾರಾಟ ಪ್ರಕರಣಕ್ಕೆ ಟ್ವಿಸ್ಟ್​

By

Published : Sep 22, 2021, 2:13 PM IST

ಹುಬ್ಬಳ್ಳಿ:ವಿಜಯಪುರದಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸುದ್ದಿಯಾಗಿದ್ದ ನವಜಾತ ಶಿಶು ಮಾರಾಟ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ಶಿಶುವನ್ನು ತೆಗೆದುಕೊಂಡವರೇ ಅನಾರೋಗ್ಯವಾದ ಕಾರಣ ಕಿಮ್ಸ್​ಗೆ ದಾಖಲಿಸಿದ್ದಾರೆ.

ಮಕ್ಕಳಿಲ್ಲದ ಕಾರಣ ಗಂಡು ಶಿಶುವನ್ನು ಸಿಂದಗಿ ಮೂಲದ ಮಂಜುನಾಥ್​ ಎಂಬಾತನಿಂದ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಆಟೋ ಚಾಲಕರೊಬ್ಬರು ಪಡೆದುಕೊಂಡಿದ್ದರು. ಅಲ್ಲದೇ ಶಿಶುವಿನ ತಾಯಿ ಹಾಗೂ ಸಂಬಂಧಿಕರೇ ಮಗುವನ್ನು ಇವರಿಗೆ ಮಾರಾಟ ಮಾಡಿದ್ದರು. ಕಳೆದ ಆಗಸ್ಟ್ 26ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ತಾಯಿಯೇ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು.

ಈ ಬಗ್ಗೆ ಸಪ್ಟೆಂಬರ್ 12ರಂದು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿಶುವಿನ ಮಾರಾಟದಲ್ಲಿ ಜಿಲ್ಲಾ ಆಸ್ಪತ್ರೆ ಸ್ಟಾಫ್​ ನರ್ಸ್ ಕಸ್ತೂರಿ ಕೈವಾಡವಿದೆ ಎಂಬ ಆರೋಪದ ಮೇಲೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಸ್ಟ್ಯಾಫ್ ನರ್ಸ್ ಕಸ್ತೂರಿ ಮೂಲಕ ಮಹಿಳೆ ರೇಣುಕಾ ಕಾಂಬಳೆ ಶಿಶು ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ. ಈ ಬಗ್ಗೆ ರೇಣುಕಾಳ ಪತಿ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಇದಾದ ಬಳಿಕ ಶಿಶು ಪತ್ತೆಯಾಗಿದ್ದು, ತನಿಖೆ ಮತ್ತೆ ಚುರುಕುಗೊಂಡಿದೆ. ಸದ್ಯ ಮಗುವಿಗೆ ಅನಾರೋಗ್ಯ ಕಾಡುತ್ತಿದ್ದು, ಮಗುವನ್ನು ತೆಗೆದುಕೊಂಡವರೇ ಅನಾರೋಗ್ಯದ ಕಾರಣ ಕಿಮ್ಸ್​ಗೆ ದಾಖಲಿಸಿದ್ದಾರೆ. ತೀವ್ರ ‌ನಿಗಾ ಘಟಕದಲ್ಲಿ ಚಿಕಿತ್ಸೆ ಕೂಡಾ ನೀಡಲಾಗುತ್ತಿದೆ.

ಇದನ್ನೂ ಓದಿ:ಅಪರೂಪದ ಘಟನೆ: ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು

ABOUT THE AUTHOR

...view details