ಹುಬ್ಬಳ್ಳಿ: ಭಾರತೀಯ ಸೇನೆಗೆ ಆಯ್ಕೆಯಾದ ಧಾರವಾಡ ಜಿಲ್ಲೆಯ ಮುದಿಕೊಪ್ಪ ಗ್ರಾಮದ ಭೀಮಕ್ಕ ಚೌಹಾಣಗೆ ಮೂರುಸಾವಿರ ಮಠದ ಶ್ರೀ ಗುರುಸಿದ್ದೇಶ್ವರ ರಾಜಯೋಗೇಂದ್ರ ಮಹಾಸ್ವಾಮಿಗಳು ಸನ್ಮಾನ ಮಾಡಿದರು.
ಭಾರತೀಯ ಸೇನೆಗೆ ಆಯ್ಕೆಯಾದ ಭೀಮಕ್ಕಗೆ ಮೂರುಸಾವಿರ ಮಠದ ಸ್ವಾಮೀಜಿಗಳಿಂದ ಸನ್ಮಾನ - Bhimakka is honored by muru savira matt swamiji
ಭಾರತೀಯ ಸೇನೆಗೆ ಆಯ್ಕೆಯಾದ ಧಾರವಾಡದ ಹುಡುಗಿ ಭೀಮಕ್ಕಗೆ ಮೂರುಸಾವಿರ ಮಠದ ಸ್ವಾಮೀಜಿ ಸನ್ಮಾನಿಸಿ ಆಶೀರ್ವಾದ ಮಾಡಿದ್ದಾರೆ.
ಭೀಮಕ್ಕನಿಗೆ ಮೂರು ಸಾವಿರ ಮಠದ ಸ್ವಾಮಿಗಳಿಂದ ಸನ್ಮಾನ
ನಂತರ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಭೀಮಕ್ಕ ಭಾರತದ ಹೆಮ್ಮೆಯ ಪುತ್ರಿ. ದೇಶ ಸೇವೆ ಮಾಡಲು ಹೋಗುತ್ತಿದ್ದಾಳೆ. ಅವಳಿಗೆ ಶುಭವಾಗಲಿ. ಇವಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವನಂತಹ ದಿಟ್ಟ ಮಹಿಳೆಯ ರೂಪ ಕಾಣುತ್ತಿದೆ. ಪ್ರತಿಯೊಬ್ಬ ಹೆಣ್ಣುಮಕ್ಕಳು ಸಹ ಇವಳ ರೀತಿ ದೇಶಸೇವೆ ಮಾಡಬೇಕು ಎಂದರು.
ಈ ಸಂದರ್ಭ ಭೀಮಕ್ಕ ಕುಟುಂಬಸ್ಥರು, ಸದಾನಂದ ಡಂಗನವರ, ದೇವರಾಜ ದಾಡಿಬಾವಿ, ಮಂಜುನಾಥ ಹೆಬಸೂರ, ಸಂತೋಷ ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.