ಹುಬ್ಬಳ್ಳಿ:ರಾಜ್ಯ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಭೂ ಸುಧಾರಣಾ ಕಾಯ್ದೆಯನ್ನು ಸಂಘ ಪರಿವಾರದ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಬಲವಾಗಿ ಖಂಡಿಸಿದೆ.
ಹುಬ್ಬಳ್ಳಿ: ನೂತನ ಕೃಷಿ ಮಸೂದೆಗೆ ಕಿಸಾನ್ ಸಂಘ ಖಂಡನೆ - Indian Kisan Sanga protest against central govt
ರೈತ ವಿರೋಧಿ ನೀತಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲು ನಮ್ಮ ಸಂಘಟನೆ ಒಪ್ಪುವುದಿಲ್ಲ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗಂಗಾಧರ ಕಸರಘಟ್ಟ ತಿಳಿಸಿದ್ದಾರೆ.
![ಹುಬ್ಬಳ್ಳಿ: ನೂತನ ಕೃಷಿ ಮಸೂದೆಗೆ ಕಿಸಾನ್ ಸಂಘ ಖಂಡನೆ Bharatiya Kisan Sangh insist aganist to anti-peasant policy](https://etvbharatimages.akamaized.net/etvbharat/prod-images/768-512-8984996-827-8984996-1601389067926.jpg)
ರೈತ ವಿರೋಧಿ ನೀತಿಯನ್ನು ಖಂಡಿಸಿದ ಭಾರತೀಯ ಕಿಸಾನ್ ಸಂಘ...
ರೈತ ವಿರೋಧಿ ನೀತಿಯನ್ನು ಖಂಡಿಸಿದ ಭಾರತೀಯ ಕಿಸಾನ್ ಸಂಘ
ನಗರದಲ್ಲಿಂದು ನಡೆದ ಉತ್ತರ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ಭೂ ಸುಧಾರಣಾ ಕಾಯ್ದೆಯಲ್ಲಿರುವ ಕೆಲವಷ್ಟು ನಿರ್ಣಯಗಳ ಬಗ್ಗೆ ಚರ್ಚಿಸಿದ್ದೇವೆ. ನಮ್ಮ ಸಂಘಟನೆ ಯಾವಾಗಲೂ ರೈತಪರ. ಹೀಗಾಗಿ ಸರ್ಕಾರಕ್ಕೆ ಇಂತಹ ರೈತ ವಿರೋಧಿ ನೀತಿಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ರಾಜ್ಯ ಕಾರ್ಯದರ್ಶಿ ಗಂಗಾಧರ ಕಸರಘಟ್ಟ ತಿಳಿಸಿದರು.
ಇಂತಹ ರೈತ ವಿರೋಧಿ ನೀತಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲು ನಮ್ಮ ಸಂಘಟನೆ ಒಪ್ಪುವುದಿಲ್ಲ. ಅದರ ಜೊತೆ ಬಿಜೆಪಿ ಸಚಿವರ ಮನೆ ಮುಂದೆ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.