ಕರ್ನಾಟಕ

karnataka

ETV Bharat / state

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ವಿಚಾರ: ಯುಪಿಎಗೆ ನೆನಪಾಗಿರಲಿಲ್ಲವೇ ಎಂದು ಶೆಟ್ಟರ್ ಪ್ರಶ್ನೆ - ಇತ್ತೀಚಿನ ಬೆಂಗಳೂರು ಸುದ್ದಿ

ಹತ್ತು ವರ್ಷ ಯುಪಿಎ ಸರ್ಕಾರ ಇದ್ದಾಗ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕೆನ್ನುವ ಮನಸ್ಸಿರಲಿಲ್ಲವೇ ಎಂದು ಮಧ್ಯಮ ಮತ್ತು ಬೃಹತ್​ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್​ ಟಾಂಗ್​ ಕೊಟ್ಟಿದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ವಿಚಾರ: ಯುಪಿಯಗೆ ನೆನಪಾಗಲಿಲ್ಲವೇ ಎಂದು ಶೆಟ್ಟರ್ ಪ್ರಶ್ನೆ

By

Published : Oct 20, 2019, 4:50 PM IST

ಧಾರವಾಡ: ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬೇಕೆನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, 10 ವರ್ಷ ಯುಪಿಎ ಸರ್ಕಾರ ಇದ್ದಾಗ ಇವರೆಲ್ಲ ಮಲಗಿದ್ದರೇನು? ಯುಪಿಎ ಸರ್ಕಾರ ಇದ್ದಾಗ ಇದು ನೆನಪಾಗಲಿಲ್ಲವೇ ಎಂದು ಸಚಿವ ಜಗದೀಶ ಶೆಟ್ಟರ್ ಪ್ರಶ್ನಿಸಿದ್ದಾರೆ.

ನಗರದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಭಾರತ ರತ್ನ ಸಿಗಲೇಬೇಕಿತ್ತು, ಇಂದು ನಾವು ಕೂಡ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯಿಸುತ್ತೇವೆ. ಅಲ್ಲದೇ, ಸಿದ್ದರಾಮಯ್ಯನವರಿಗೆ ಬುದ್ಧಿ ಇದೆಯೋ ಇಲ್ಲವೋ ಗೊತ್ತಿಲ್ಲ, ಅವರು ಕಾಂಗ್ರೆಸ್‌ಗೆ ಇತ್ತೀಚೆಗೆ ಬಂದವರು. ತುರ್ತು ಪರಿಸ್ಥಿತಿ ಸಮಯದಲ್ಲಿ ಇದೇ ಸಿದ್ದರಾಮಯ್ಯ ಇಂದಿರಾ ಗಾಂಧಿಗೆ ಸರ್ವಾಧಿಕಾರಿ ಅಂದಿದ್ರು. ಈಗ ಅದೇ ಕಾಂಗ್ರೆಸ್‌ನಲ್ಲಿ ಇದ್ದಾರಲ್ಲವೇ? ಅದಕ್ಕೇನು ಉತ್ತರ ಕೊಡ್ತಿರಿ ಎಂದು ಪ್ರಶ್ನಿಸಿದರು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ವಿಚಾರ: ಯುಪಿಎಗೆ ನೆನಪಾಗಲಿಲ್ಲವೇ ಎಂದು ಶೆಟ್ಟರ್ ಪ್ರಶ್ನೆ

ಇನ್ನು, ಮಾಜಿ ಪ್ರಧಾನಿ ರಾಜೀವ ಗಾಂಧಿ ಕೊಡುಗೆ ಈ ದೇಶಕ್ಕೆ ಏನಿದೆ? ಬೊಫೋರ್ಸ್ ಹಗರಣವೇ ರಾಜೀವ ಗಾಂಧಿ ಕೊಡುಗೆ ಇರಬೇಕು.‌ ಪ್ರಧಾನಿ ಮೋದಿಯವರು ಉತ್ತಮ ಆಡಳಿತ ಕೊಡುತ್ತಿದ್ದಾರೆ.‌ ದೇಶ ಆಧೋಗತಿಗೆ ತಲುಪಲು ಕಾಂಗ್ರೆಸ್ 60 ವರ್ಷ ಲೂಟಿ ಮಾಡಿದ್ದೇ ಕಾರಣವೆಂದು ಶೆಟ್ಟರ್​ ಕಿಡಿಕಾರಿದರು. ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಮಾತನಾಡಿದ ದಾಖಲೆಗಳನ್ನು ತಿರುಗಿ ನೋಡಲಿ.‌ ತಮ್ಮ ಹಿಂದಿನ ಹೇಳಿಕೆ ಅವಲೋಕನ ಮಾಡಿದ್ರೆ ಯಾರು ಸರ್ವಾಧಿಕಾರಿ ಎಂದು ಗೊತ್ತಾಗುತ್ತೆ ಎಂದು ಶೆಟ್ಟರ್​ ಗುಡುಗಿದರು.

ಇನ್ನು, ಗೋವಾ ಕಾಂಗ್ರೆಸ್ ಸುಮ್ಮನಿದ್ರೆ ಮಾತ್ರ ಮಹದಾಯಿ ಇತ್ಯರ್ಥವಾಗುತ್ತೆ ಎಂದು ಶೆಟ್ಟರ್ ಹೇಳಿದ್ದಾರೆ. ಮಹದಾಯಿಯಲ್ಲಿ ಸರ್ಕಾರದ ಪ್ರಶ್ನೆ ಬರುವುದಿಲ್ಲ, ಎರಡು ರಾಷ್ಟ್ರೀಯ ಪಕ್ಷಗಳ ಪ್ರಶ್ನೆ ಬರುತ್ತೆ.‌ ಗೋವಾ ಕಾಂಗ್ರೆಸ್ ನಿಲುವೇನು ಎಂದು ಪ್ರಶ್ನಿಸಿದ ಕೈಗಾರಿಕಾ ಸಚಿವರು, ದೇಶಾದ್ಯಂತ ಬಿಜೆಪಿಯದ್ದು ಒಂದೇ ನಿಲುವು ಇದೆ. ಆದರೆ ಕಾಂಗ್ರೆಸ್ ವಿರೋಧ ಮಾಡುತ್ತಾ ಬಂದಿದೆ.‌ ಗೋವಾ ಸಿಎಂ ಮಾತುಕತೆಗೆ ರೆಡಿ ಇದಾರೆ. ಕೆಲವೇ ದಿನಗಳಲ್ಲಿ ಮಹದಾಯಿ ನೋಟಿಫಿಕೇಷನ್ ಆಗುತ್ತೆ ಎಂದು ಅಭಿಪ್ರಾಯಟ್ಟರು.

ABOUT THE AUTHOR

...view details