ಕರ್ನಾಟಕ

karnataka

ETV Bharat / state

ಭಾರತ ಬಂದ್ ಹಿನ್ನೆಲೆ ಧಾರವಾಡದಲ್ಲಿ ಪ್ರತಿಭಟನೆ: ಇಲ್ಲಿದೆ ಪ್ರತ್ಯಕ್ಷ ವರದಿ - ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ಬಸ್ ತಡೆ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ರೈತರೊಬ್ಬರು ಬಸ್‌ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

Bharat Bandh: farmers protest in dharwad
ಭಾರತ ಬಂದ್ ಹಿನ್ನೆಲೆ ಧಾರವಾಡದಲ್ಲಿ ಪ್ರತಿಭಟನೆ: ವಾಕ್​ ಥ್ರೂ

By

Published : Sep 27, 2021, 8:22 AM IST

ಧಾರವಾಡ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ರೈತನೊಬ್ಬ ಬಸ್‌ಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ​ಎಂದಿನಂತೆ ಆರಂಭಗೊಂಡಿರುವ ಬಸ್ ಸಂಚಾರ ಸ್ಥಗಿತಗೊಳಿಸಿ ಬಂದ್​ಗೆ ಬೆಂಬಲಿಸುವಂತೆ ಒತ್ತಾಯಿಸಿದರು.

ನಗರದ ಜ್ಯುಬಿಲಿ ಸರ್ಕಲ್‌ನಲ್ಲಿ ಬಸ್ ತಡೆದ ರೈತ ಮುಖಂಡ ನಿಂಗಪ್ಪಾ ಲಿಗಾಡೆ, ಬಸ್​​ ಮುಂದೆಯೇ ಮಲಗಿ ಆಕ್ರೋಶ ಹೊರಹಾಕಿದರು. ನಮ್ಮ ಮೇಲೆ ಹಾಯಿಸಿಕೊಂಡು ಹೋಗಿ, ಬಸ್​ ಸಂಚಾರ ಬಂದ್​ ಮಾಡಿ ರೈತರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡರು.

ವಾಕ್​ ಥ್ರೂ

ಬಂದ್​ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಧಾರವಾಡ ಜ್ಯುಬಿಲಿ ಸರ್ಕಲ್‌ನಲ್ಲಿ ರೈತರು ಜಮಾಯಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಯಾವುವು? ಅವುಗಳ ಬಗ್ಗೆ ನಿಮಗೆಷ್ಟು ಗೊತ್ತು?

ABOUT THE AUTHOR

...view details