ಕರ್ನಾಟಕ

karnataka

ETV Bharat / state

ಎಷ್ಟ್‌ ಮನವಿ ಮಾಡಿದ್ರೂ ರಸ್ತೆ ನೆಟ್ಟಗೆ ಮಾಡಿಲ್ರೀ.. ನಾವ್‌ ಈ ಸಾರಿ ಹು-ಧಾ ಪಾಲಿಕೆ ಚುನಾವಣೆ ಬಹಿಷ್ಕರಿಸ್ತೀವ್ರೀ..

ರಾತ್ರಿ ಹೋತ್ತು ಪುರುಷರೇ ನಡೆದಾಡಲು ಭಯವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ ಸ್ವಹಿತಾಸಾಕ್ತಿಗಾಗಿ ನಮ್ಮೆಲ್ಲರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ನಮಗೆ ಶಾಶ್ವತ ಪರಿಹಾರ ಸಿಗುವವರೆಗೂ ಯಾವುದೇ ಕಾರಣಕ್ಕೂ ನಾವ್ಯಾರೂ ಮತ ಚಲಾಯಿಸುವುದಿಲ್ಲ..

ಪಾಲಿಕೆ ಚುನಾವಣೆ ಮತದಾನ ಬಹಿಷ್ಕರಿಸಿದ ಭೈರಿದೇವರಕೊಪ್ಪ ಜನ
ಪಾಲಿಕೆ ಚುನಾವಣೆ ಮತದಾನ ಬಹಿಷ್ಕರಿಸಿದ ಭೈರಿದೇವರಕೊಪ್ಪ ಜನ

By

Published : Aug 27, 2021, 5:05 PM IST

ಹುಬ್ಬಳ್ಳಿ :ಕಳೆದ ಕೆಲವು ವರ್ಷಗಳಿಂದ ಭೈರಿದೇವರಕೊಪ್ಪದ ರಾಜಧಾನಿ ಕಾಲೋನಿ, ಮಲ್ಲನಗೌಡ ಚಾಳ, ನಮ್ರತಾ ಪಾರ್ಕ್ ಬಡಾವಣೆಗಳಿಗೆ ರಸ್ತೆ ಮಾರ್ಗವನ್ನು ಕಲ್ಪಿಸದ ಜನಪ್ರತಿನಿದಿನಗಳ ನಡೆ ವಿರೋಧಿಸಿ ಸ್ಥಳೀಯರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ್ದಾರೆ.

ಈ ಬಡಾವಣೆಯ ವ್ಯಾಪ್ತಿಯಲ್ಲಿ ಸುಮಾರು 1000ಕ್ಕೂ ಅಧಿಕ ಜನರು ವಾಸವಿದ್ದು, 500ಕ್ಕೂ ಹೆಚ್ಚು ವೋಟರ್‌ಗಳಿದ್ದಾರೆ. ಪ್ರತಿ ಮನೆ ಮನೆಯ ಮುಂದೆಯೂ ಮತದಾನ ಬಹಿಷ್ಕಾರ ಎಂಬ ಸೂಚನಾ ಫಲಕ ನೇತು ಹಾಕಿ ಪಾಲಿಕೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯು ಮತ ಕೇಳಲು ಬರಬೇಡಿ ಎಂಬ ಸಂದೇಶ ನೀಡಿದ್ದಾರೆ.

ಕೆಲವು ವರ್ಷಗಳಿಂದ ಬಡಾವಣೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನೇ ಬಂದ್ ಮಾಡಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.

ಪಾಲಿಕೆ ಚುನಾವಣೆ ಮತದಾನ ಬಹಿಷ್ಕರಿಸಿದ ಭೈರಿದೇವರಕೊಪ್ಪ ಜನ

ಈಗಾಗಲೇ ಸಾಕಷ್ಟು ಬಾರಿ ಶಾಸಕರು, ಸಚಿವರು, ಕಾರ್ಪೊರೇಟರಗಳಿಗೆ ಮನವಿ ಸಲ್ಲಿಸಿದರು ಯಾರೂ ಕೂಡ ಮುತುವರ್ಜಿ ವಹಿಸಿಲ್ಲ. ಇದೀಗ ಮತದಾನ ಬಹಿಷ್ಕಾರ ಮಾಡಿರುವ ಸುದ್ದಿ ತಿಳಿದು ಬರುವ ನಾಯಕರು ನಮಗೆ ಶಾಶ್ವತ ಪರಿಹಾರ ನೀಡಲಿ, ಇಲ್ಲದಿದ್ರೆ ಮತದಾನ ಬಹಿಷ್ಕರಿಸುತ್ತೇವೆ ಎಂದು ಜನಪ್ರತಿನಿದಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದರು.

ಈ ಕುರಿತು ಸ್ಥಳೀಯ ನಿವಾಸಿ ಪ್ರಭು ಮುಂಡಗೋಡ ಮಾತನಾಡಿ, ಬಹಳ ದಿನಗಳಿಂದ ಈ ಸಮಸ್ಯೆ ಇದ್ದರೂ ಕೂಡ ಯಾವೊಬ್ಬ ಜನಪ್ರತಿನಿದಿನಗಳು ಗಮನ ಹರಿಸಿಲ್ಲ. ಗ್ಯಾರೇಜ್ ಮುಂಭಾಗದಲ್ಲಿ ಕಿರಿದಾದ ರಸ್ತೆಯಲ್ಲಿ ಬರುವಾಗ ಅನೇಕ ಅಪಾಘತಗಳು ನಡೆಯುತ್ತವೆ. ಆರೋಗ್ಯ ಸಮಸ್ಯೆ ಆದರೆ ಆ್ಯಂಬುಲೆನ್ಸ್‌ ಬರಲು ಸಹ ಸಾಧ್ಯವಾಗದ ರೀತಿಯಲ್ಲಿ ರಸ್ತೆ ಇದೆ.

ರಾತ್ರಿ ಹೋತ್ತು ಪುರುಷರೇ ನಡೆದಾಡಲು ಭಯವಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರ ಸ್ವಹಿತಾಸಾಕ್ತಿಗಾಗಿ ನಮ್ಮೆಲ್ಲರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ನಮಗೆ ಶಾಶ್ವತ ಪರಿಹಾರ ಸಿಗುವವರೆಗೂ ಯಾವುದೇ ಕಾರಣಕ್ಕೂ ನಾವ್ಯಾರೂ ಮತ ಚಲಾಯಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಹು-ಧಾ ಪಾಲಿಕೆ ಚುನಾವಣೆ: 66 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್​​

ABOUT THE AUTHOR

...view details