ಹುಬ್ಬಳ್ಳಿ: ಮಳೆಯ ಆರ್ಭಟಕ್ಕೆ ಧಾರವಾಡ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಅದರಲ್ಲೂ ನವಲಗುಂದ ತಾಲೂಕಿನ ಬೆಣ್ಣೆ ಹಳ್ಳ ಮೈದುಂಬಿ ಹರಿಯುತ್ತಿದ್ದು, ತಾಲೂಕಿನ ಹಳ್ಳಿ ಜನರಿಗೆ ಅಕ್ಷರಶಃ ದಿಗ್ಬಂಧನ ಹೇರಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ: ಅಪಾರ ಪ್ರಮಾಣದ ಬೆಳೆ ಹಾನಿ - Crop Damage in Darwad
ಧಾರವಾಡದಲ್ಲಿ ಬಿರುಸಿನ ಮಳೆಯಾಗುತ್ತಿದ್ದು ನವಲಗುಂದ ತಾಲೂಕಿನ ಬೆಣ್ಣೆ ಹಳ್ಳ ಮೈದುಂಬಿ ಹರಿಯುತ್ತಿದೆ. ತಾಲೂಕಿನ ಶಿರಕೋಳ, ಆಯಟ್ಟಿ, ಶಿರೂರ, ಗುಮ್ಮಗೋಳ ಹಾಗೂ ಹಣಸಿ, ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ.
![ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ: ಅಪಾರ ಪ್ರಮಾಣದ ಬೆಳೆ ಹಾನಿ ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ](https://etvbharatimages.akamaized.net/etvbharat/prod-images/768-512-8307901-24-8307901-1596635452398.jpg)
ಹಳ್ಳಿಗಳಿಗೆ ಬೆಣ್ಣೆ ಹಳ್ಳದ ದಿಗ್ಬಂಧನ
2007, 2009ರ ಬಳಿಕ ಈಗ ಇನ್ನೊಂದು ಸಲ ಬೆಣ್ಣೆ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಗ್ರಾಮೀಣ ಜನರ ನೆಮ್ಮದಿ ಕೆಡಿಸಿದೆ.
ನಗರ, ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜತೆಗಿನ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ಗ್ರಾಮಗಳು ನಡುಗಡ್ಡೆಯಂತಾಗಿವೆ.