ಹುಬ್ಬಳ್ಳಿ:ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಜಿಲ್ಲಾ ಉಸ್ತುವಾರಿಗಳು ಇಲ್ಲ. 16 ದಿನದಿಂದ ಒಬ್ಬರೇ ಸಿಎಂ ಆಗಿ ಅಧಿಕಾರ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಟೀಕಾ ಪ್ರಹಾರ ನಡೆಸಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲು... ಸಂಪುಟ ರಚನೆ ಇಲ್ಲದೇ ಸಿಎಂ ಅಧಿಕಾರ: ಬಿಜೆಪಿ ವಿರುದ್ಧ ಹೊರಟ್ಟಿ ಕಿಡಿ - Council member Basavaraj horatti
ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಜಿಲ್ಲಾ ಉಸ್ತುವಾರಿಗಳು ಇಲ್ಲ. 16 ದಿನದಿಂದ ಒಬ್ಬರೇ ಸಿಎಂ ಆಗಿ ಅಧಿಕಾರ ಮಾಡುತ್ತಿರುವುದು ಇತಿಹಾಸದಲ್ಲೇ ಮೊದಲು ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವ್ಯಂಗ್ಯವಾಡಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಸರ್ಕಾರ ನಡೆಯಬೇಕಾದರೆ ಮಂತ್ರಿ ಮಂಡಲ ಬೇಕು. ಕೇಂದ್ರ ಸರ್ಕಾರ ಇಲ್ಲಿಯೂ ನೋಡಬೇಕು, ಇಡೀ ದೇಶದಲ್ಲೆ ದೊಡ್ಡ ಅನಾಹುತ ಆಗಿದೆ. ಇನ್ನು ಅನರ್ಹ ಶಾಸಕರ ಬಗ್ಗೆಯೇ ಬಿಜೆಪಿಯವರು ಚಿಂತೆ ಮಾಡುತಿದ್ದಾರೆ. ಅದನ್ನ ಬಿಟ್ಟು ಪ್ರವಾಹದ ಬಗ್ಗೆ ಚಿಂತೆ ಮಾಡಲಿ. ವಿರೋಧ ಪಕ್ಷದ ನಾಯಕ ಕೂಡಾ ಆಯ್ಕೆ ಆಗಿಲ್ಲ. ಅದನ್ನ ಮಾಡಿದರೆ, ಅವರಾದ್ರೂ ಬರಬಹುದಿತ್ತು. ನಾನು ಅತೀವೃಷ್ಟಿ ಸ್ಥಳಕ್ಕೆ ಹೋಗೊದಕ್ಕೂ, ಸಿದ್ದರಾಮಯ್ಯ, ಕುಮಾರಸ್ವಾಮಿ ಹೋಗೊದಕ್ಕೂ ಅಂತರ ಆಗುತ್ತೆ. ಉತ್ತರ ಕರ್ನಾಟಕವನ್ನ ನಿಷ್ಕಾಳಜಿ ಮಾಡಲಾಗುತ್ತಿದೆ ಎಂದು ನಾವು ಒಪ್ಪಿಕೊಳ್ಳಲೇಬೇಕು. ಕೇಂದ್ರ ಸರ್ಕಾರ ಈಗಲಾದರೂ ಕರ್ನಾಟಕದ ಬಗ್ಗೆ ಯೋಚನೆ ಮಾಡಲಿ ಎಂದರು.
ಇನ್ನು, ಸಮಯದ ಅಭಾವದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಧಾರವಾಡ ಜಿಲ್ಲೆ ಪ್ರವಾಸ ದಿಢೀರ್ ರದ್ದಾಗಿದೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.