ಕರ್ನಾಟಕ

karnataka

ETV Bharat / state

ಪ್ರಧಾನಿಗೆ ಪತ್ರ ಬರೆದು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಭಿಕ್ಷುಕನ ಆಕ್ರೋಶ - Government and MLA

ಕೊರೊನಾ ಮಹಾಮಾರಿ ತಡೆಗಟ್ಟುವುದರಿಂದ ಹಿಡಿದು ಜನ ಸಾಮಾನ್ಯರ ನೆರವಿಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಹಿಗ್ಗಾಮುಗ್ಗಾ ಬೈಯ್ದಿದ್ದಾನೆ. ಸೋಂಕು ಹೆಚ್ಚಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಭಿಕ್ಷುಕನ ಆಕ್ರೋಶ
ಭಿಕ್ಷುಕನ ಆಕ್ರೋಶ

By

Published : May 21, 2021, 7:07 PM IST

Updated : May 21, 2021, 8:26 PM IST

ಹುಬ್ಬಳ್ಳಿ: ಲಾಕ್​ಡೌನ್ ಸಂಕಷ್ಟದಿಂದ ಕೈಯಲ್ಲಿದ್ದ ಉದ್ಯೋಗ ಕಳೆದುಕೊಂಡು, ನಿರ್ಗತಿಕನಾಗಿದ್ದ ವಿಕಲಚೇತನ ವ್ಯಕ್ತಿಯೊಬ್ಬ ಕೇಂದ್ರ, ರಾಜ್ಯ ಹಾಗೂ ಜನಪ್ರತಿನಿಧಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿರುವ ಘಟನೆ ನಡೆದಿದೆ.

ನಗರದ ಚನ್ನಮ್ಮ ಸರ್ಕಲ್​ನಲ್ಲಿ ಭಿಕ್ಷೆ ಬೇಡಿಕೊಂಡು ಅವರಿವರು ನೀಡುವ ಆಹಾರ ಪಡೆದು ತುತ್ತಿನ ಚಿಲ ತುಂಬಿಸಿಕೊಳ್ಳುತ್ತಿರುವ ವೀಕಲಚೇತನ ಭಿಕ್ಷುಕ ಮಂಜುನಾಥನ ಆಕ್ರೋಶವಿದು. ಮೈಸೂರ ಮೂಲದ ಈತ ಪದವೀಧರನಾಗಿದ್ದ, ಉದ್ಯೋಗವಿಲ್ಲದೇ ಆಟೋ ಚಾಲಕನಾಗಿ ಕೆಲಸ ಮಾಡಿ ನಂತರ ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದ. ಆದರೆ, ಕೊರೊನಾ ಮಹಾಮಾರಿ ಲಾಕ್​ಡೌನ್​ನಿಂದಾಗಿ, ಕೈಯಲ್ಲಿದ್ದ ಉದ್ಯೋಗ ಕಳೆದುಕೊಂಡು ಈಗ ನಿರ್ಗತಿಕನಾಗಿದ್ದಾನೆ.

ಸರ್ಕಾರ ಹಾಗೂ ಜನಪ್ರತಿನಿದಿಗಳ ವಿರುದ್ಧ ಭಿಕ್ಷುಕನ ಆಕ್ರೋಶ

ಕೊರೊನಾ ಮಹಾಮಾರಿ ತಡೆಗಟ್ಟುವುದರಿಂದ ಹಿಡಿದು ಜನ ಸಾಮಾನ್ಯರ ನೆರವಿಗೆ ಬರಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಹಿಗ್ಗಾಮುಗ್ಗಾ ಬೈಯ್ದಿದ್ದಾನೆ. ಸೋಂಕು ಹೆಚ್ಚಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಕಾರಣರಾಗಿದ್ದಾರೆ, ಸರ್ಕಾರದ ಆಡಳಿತ ವೈಖರಿಯನ್ನು ವಿರೋಧಿಸಬೇಕಾದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಯಡಿಯೂರಪ್ಪ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವರ ಮುಖವಾಡ ಕಳಿಚಿ ನೈಜ ಕೆಲಸಕ್ಕೆ ಮುಂದಾಗಬೇಕು.

ನಮ್ಮಂತ ನಿರ್ಗತಿಕರಿಗೆ ಉದ್ಯೋಗ ಹಾಗೂ ತಾತ್ಕಾಲಿಕ ನೆರವು ನೀಡುವ ಕೆಲಸಕ್ಕೆ ಸರ್ಕಾರಗಳು ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ, ತನ್ನ ಸಂಕಟವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸದ್ಯದಲ್ಲಿ ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಅಳಲು ತೋಡಿ ಕೊಂಡಿದ್ದಾನೆ.

Last Updated : May 21, 2021, 8:26 PM IST

ABOUT THE AUTHOR

...view details