ಧಾರವಾಡ: ಸಿಎಂ ಬೊಮ್ಮಾಯಿ ಅವರು ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಕ್ಕೆ ಬಂದಿರುವ ಹಿನ್ನೆಲೆ ಕೃಷಿ ಮೇಳಕ್ಕೆ ಬರಲು ಆಗಲಿಲ್ಲ. ನೀನೆ ಹೋಗಿ ಬಾ ಎಂದು ನನಗೆ ಹೇಳಿದರು ಎಂದು ಧಾರವಾಡದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ 5,000ಕೋಟಿ ಘೋಷಿಸಿದ ಕೂಡಲೇ ಬಿಜೆಪಿಯವರು ಜೊಲ್ಲು ಸುರಿಸುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಜೊಲ್ಲು ಸುರಿಸುವುದು ಗೊತ್ತಿದೆ. ಜೊಲ್ಲು ಸುರಿಸುವುದರಲ್ಲಿ ಅವರು ನಿಸ್ಸೀಮರು. ಅವರೆಲ್ಲ ಹೈಫೈ ಲೈಫ್ನಲ್ಲಿ ಬೆಳೆದವರು ರೈತರ ಬಗ್ಗೆ ಕಾಳಜಿ ಇಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೆಣ್ಣು ಮಗಳ ಬಗ್ಗೆ ಅಸಹ್ಯವಾಗಿ ಈ ಹಿಂದೆ ಅವರು ಮಾತನಾಡಿದ್ದಾರೆ. ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದರು.